ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ನಗರದ ಚುಂಚನಕಟ್ಟೆ ಡ್ಯಾಮ್ ಬಳಿ ನಡೆದಿದೆ.ಸಾಗರ್ (16) ಮತ್ತು ಚೇತನ್ (16) ಮೃತ ವಿದ್ಯಾರ್ಥಿಗಳು. ಇವರು ಕೆ.ಆರ್.ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದು, ಬುಧವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಈಜಾಡಲೂ ನದಿಗೆ ತೆರಳಿ ಮೃತಪಟ್ಟಿದ್ದಾರೆ.ಸಾಗರ್ ಮತ್ತು ಚೇತನ್ ಪರೀಕ್ಷೆ ಬರೆದ ನಂತರ ಮತ್ತಿಬ್ಬರು ಗೆಳೆಯರ ಜೊತೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸ್ನೇಹಿತರು ಜೆರಾಕ್ಸ್ ಗೆ ಹೋಗಿದ್ದ ಸಂದರ್ಭದಲ್ಲಿ ಈಜಲು ಕಾವೇರಿ ನದಿಗೆ ತೆರಳಿದ್ದಾರೆ. ಈ ವೇಳೆ ಈಜಲು ಬಾರದೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಕೊಡಲೇ ಸ್ನೇಹಿತರು ಗಾಬರಿಗೊಂಡು ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರ ಮೃತದೇಹಕ್ಕಾಗಿ ಕಾರ್ಯಚರಣೆ ಮಾಡಿದ್ದು, ಸಾಗರ್ ಮತ್ತು ಚೇತನ್ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಘಟನೆ ಸಂಬಂಧ ಕೆ.ಆರ್.ನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


