ಮೈಸೂರು: ನೆಚ್ಚಿನ ಜನನಾಯಕನನ್ನು ಮೆಚ್ಚಿಸೋಕ್ಕೆ ಅಭಿಮಾನಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇಬು ಹಣ್ಣುಗಳ ಹಾರ ಹಾಕಿ ಸ್ವಾಗತ ಮಾಡಲಾಗಿತ್ತು.ಈಗ ಅಭಿಮಾನಿಯೊಬ್ಬರು ಎಚ್‍ಡಿ ಕುಮಾರಸ್ವಾಮಿ ಅವರಿಗೆ ರಾಗಿ ತೆನೆ ಹಾರ ಅರ್ಪಿಸಿ ಅಭಿಮಾನ ಮೆರೆದಿದ್ದಾರೆ. ಜಿಲ್ಲೆಯ ಟಿ.ನರಸೀಪುರದಲ್ಲಿ ಇಂತಹದ್ದೊಂದು ಅಭಿಮಾನ ಕಂಡು ಬಂದಿದ್ದು, ಅಭಿಮಾನಿಯೊಬ್ಬ ತೆನೆ ಹೊತ್ತ ಮಹಿಳೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಅಭಿಮಾನಿಯೊಬ್ಬ ಬೃಹತ್ ಆಕಾರದ ರಾಗಿ ತೆನೆ ಹಾರ ಅರ್ಪಿಸಿ ಖುಷಿ ಪಟ್ಟಿದ್ದಾರೆ. ಇದನ್ನು ಓದಿ: ಕ್ರೇನ್ ಮೂಲಕ ಸಚಿವ ಶಿವಕುಮಾರ್ ಗೆ 300 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನ!ಇದು ಅಂತಿಂತಾ ಹಾರ ಅಲ್ಲ 12 ಅಡಿ ಉದ್ದ, 250 ಕೆ.ಜಿ. ತೂಕವಿದ್ದು, ಹಾರವನ್ನು ಅರ್ಪಿಸುವುದಕ್ಕೆ ಕ್ರೇನ್ ಬಳಸಿರುವುದು ವಿಶೇಷವಾಗಿದೆ. ಬುಧವಾರ ಟಿ.ನರಸೀಪುರದಲ್ಲಿ ರೋಡ್ ಶೋ ಇತ್ತು. ಇದಕ್ಕಾಗಿ ಕುಮಾರಸ್ವಾಮಿ ತೆರೆದ ಬಸ್ ನಲ್ಲಿ ಆಗಮಿಸಿದಾಗ ಕ್ರೇನ್ ಮೂಲಕ ಬೃಹತ್ ಆಕಾರದ ರಾಗಿ ತೆನೆ ಹಾರ ಅರ್ಪಿಸಲಾಗಿದೆ.Sign in to your account
Username or Email Address


Password

 Remember Me


