ಮಂಡ್ಯ: ಅಣ್ಣ-ತಮ್ಮಂದಿರ ನಡುವಿನ ಜಗಳದಲ್ಲಿ ಅಣ್ಣನ ಮಗನನ್ನು ತಮ್ಮ ಶೂಟ್ ಮಾಡಿ‌ ಕೊಲೆ ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ‌ ಜರುಗಿದೆ.ಹನುಮನಹಳ್ಳಿಯ ವಾಸು ಮತ್ತು ಕುಮಾರ್ ಎಂಬ ಅಣ್ಣ ತಮ್ಮಂದಿರ ನಡುವೆ ಆಗಾಗ್ಗೆ ಜಗಳ ನಡೆಯುತ್ತ ಇತ್ತು. ಇಂದು (ಶನಿವಾರ) ಕುಮಾರ್ ತನ್ನ ಅಣ್ಣ ವಾಸು ಹಾಗೂ ಅವರ ಮಗ ಜಯಪಾಲ್‌ನನ್ನು ಸಮಸ್ಯೆ ಬಗೆಹರಿಕೊಳ್ಳೋಣಾ ಬನ್ನಿ ಎಂದು ತೋಟಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಇವರ ನಡುವೆ ಜಮೀನಿನ ವಿಚಾರಕ್ಕೆ ಜಗಳವಾಗಿದೆ. ಜಗಳದಿಂದ ಕುಪಿತಕೊಂಡ ಕುಮಾರ್ ಅಣ್ಣ ವಾಸುವಿನ ಮಗ ಜಯಪಾಲ್‌ಗೆ ಗನ್‌ನಿಂದ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್ಈ ವೇಳೆ ಜಯಪಾಲ್‌ನ ಎದೆ, ತೋಳು‌ ಹಾಗೂ ಮುಖದ ಭಾಗಕ್ಕೆ ಗುಂಡೇಟು ಬಿದ್ದಿದೆ. ಇದರಿಂದ ತೀವ್ರ ರಕ್ತಸ್ರಾವದಿಂದ ಒದ್ದಾಡಿದ ಜಯಪಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ವೇಳೆ ಅಣ್ಣನ ಮಗನನ್ನು ಗುಂಡಿಟ್ಟು‌ ಕೊಲೆ ಮಾಡಿದ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ.ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: 50 ಶಾಸಕರು BJP ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ – ಕಾಂಗ್ರೆಸ್‌ ಸರ್ಕಾರದ ಪತನ ಗ್ಯಾರಂಟಿ: ನಿರಾಣಿ ಬಾಂಬ್‌Sign in to your account
Username or Email Address


Password

 Remember Me


