ಮಂಗಳೂರು: ಕಪ್ಪು ಕಲ್ಲು ಗಣಿಗಾರಿಕೆ ನಿರ್ಜನ ಪ್ರದೇಶದಲ್ಲಿ ಅನುಮತಿ ಪಡೆದು ನಡೆಸುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಜನ ವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ (Illegal Mining) ಆರ್ಭಟಿಸುತ್ತಿದೆ. ಕಟ್ಟಡಗಳು ಬಿರುಕು ಬಿಟ್ಟು, ಸ್ಫೋಟದ ಸದ್ದಿಗೆ ಅಂಗನವಾಡಿಯ ಪುಣಾಣಿ ಮಕ್ಕಳು ಬೆದರುತ್ತಿದ್ದಾರೆ. ಈ ಬಗ್ಗೆ ಜನ ಪ್ರತಿನಿಧಿಗಳಿಗೆ ದೂರು ನೀಡಿದ್ರೂ ಅಧಿಕಾರಿಗಳು ದಾಳಿ ನಡೆಸಿದ್ರೂ ಗಣಿಗಾರಿಕೆ ಮಾತ್ರ ಶಾಶ್ವತವಾಗಿ ಮುಚ್ಚುತ್ತಿಲ್ಲ.ಅಕ್ರಮ ಕಲ್ಲುಗಾರಿಕೆಯಿಂದ ಈ ಊರೇ ನಲುಗಿ ಹೋಗಿದೆ. ಮನೆ, ಮಸೀದಿ ಅಂಗನವಾಡಿ ಬಿರುಕು ಬಿಟ್ಟಿದೆ. ಗಣಿಗಾರಿಕೆ ಸ್ಫೋಟದಿಂದ ಪುಟ್ಟ ಮಕ್ಕಳು ಭಯಪಡುವಂತಾಗಿದೆ. ಮಂಗಳೂರು (Mangaluru) ಹೊರ ವಲಯದ ನೀರು ಮಾರ್ಗ (Neeru Marga) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿತ್‍ಪಾದೆಯಲ್ಲಿ ಜನವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಆರ್ಭಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಬಿತ್‍ಪಾದೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದೆ. ಹತ್ತು ಮೀಟರ್ ದೂರದಲ್ಲೇ ಅಂಗನವಾಡಿ ಇದ್ದು, ಪುಟ್ಟ ಕಂದಮ್ಮಗಳು ಬೆದರುತ್ತಿದ್ದಾರೆ.ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಊರವರು ಜನಪ್ರತಿನಿಧಿಗಳಿಗೆ ದೂರು ನೀಡಿದಾಗ ತಾತ್ಕಾಲಿಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡುತ್ತಾರೆ.. ಊರವರ ಕೋಪ ತಣ್ಣಗಾದಾಗ ಮತ್ತೆ ಗಣಿಗಾರಿಕೆ ಶುರುವಾಗುತ್ತೆ. ಇದನ್ನೂ ಓದಿ: ಅಣ್ಣನ ಪತ್ನಿ, ಮಕ್ಕಳಿಬ್ಬರನ್ನು ಕೊಂದು ಆರೋಪಿ ಎಸ್ಕೇಪ್!ಅಕ್ರಮ ಕಲ್ಲು ಗಣಿಗಾರಿಕೆಯಿಂದ ಊರವರು ರೋಸಿ ಹೋಗಿದ್ದಾರೆ.. ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವ ಬದಲು ಶಾಶ್ವತ ತಡೆಗೆ ಆಗ್ರಹಿಸಿದ್ದಾರೆ. ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸದೇ ಇದ್ರೆ ದೊಡ್ಡ ಹೋರಾಟ ನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


