ಬಾಗಲಕೋಟೆ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾದ ಘಟನೆ ಬಾಗಲಕೋಟೆಯ ನವನಗರ ಸೆಕ್ಟರ್ ನಂ. 3ರಲ್ಲಿ ಮಧ್ಯರಾತ್ರಿ ನಡೆದಿದೆ.ರೂಪಾ ಮಂಜುನಾಥ್ ಬೂದಿಹಾಳ(26) ಮೃತ ಗೃಹಿಣಿ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ರೂಪಾ ಪೋಷಕರು ಆರೋಪಿಸಿದ್ದಾರೆ. ಮೃತಳ ಗಂಡ ಮಂಜುನಾಥ್ ಬೂದಿಹಾಳ ಹಾಗೂ ಅತ್ತೆ ಮಾವ ನಮ್ಮ ಮಗಳ ಕೊಲೆ ಮಾಡಿದ್ದಾರೆ ಅಂತಾ ಮಹಿಳೆ ಪೋಷಕರು ಆರೋಪಿಸುತ್ತಿದ್ದಾರೆ.ರೂಪಾ ಮಂಜುನಾಥ್ ಪೋಷಕರು ಅತ್ತೆ ಲಕ್ಷಮವ್ವ ಹಾಗೂ ಮಾವ ನಾಗಪ್ಪಗೆ ಥಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


