ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವೇ ಇಲ್ಲ ಎಂಬ ಪ್ರಶ್ನೆ ಹಲವರಲ್ಲಿ ಹುಟ್ಟಿಕೊಂಡಿದೆ.ನಗರದ ನಿವಾಸಿಯಾಗಿರುವ ಶಬಾನಾ ತಲೆಸುತ್ತು ಅಂತಾ ನಗರದ ಸಪ್ತಗಿರಿ ಆಸ್ಪತ್ರೆಗೆ ಬಂದಿದ್ದಾರೆ. ಕೇವಲ ತಲೆಸುತ್ತ ಬಂದಿದ್ದರಿಂದ ಆಸ್ಪತ್ರೆಯ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದಾರೆ. ಆಸ್ಪತ್ರೆಯವರು ನೇರವಾಗಿ ಶಬಾನಾರನ್ನು ಐಸಿಯುನಲ್ಲಿ ಇಟ್ಟಿದ್ದಾರೆ. ಏನಾಗಿದೆ ರೋಗಿಗೆ ಎಂದು ಕುಟುಂಬಸ್ಥರು ಎರಡು ದಿನದಿಂದ ಕೇಳುತ್ತಿದ್ದರೂ, ಆಸ್ಪತ್ರೆ ಸಿಬ್ಬಂದಿ ಯಾವುದೇ ಸ್ಪಷ್ಟನೆ ನೀಡಿಲ್ಲ.ಇನ್ನು ವೈದ್ಯಕೀಯ ಪರೀಕ್ಷೆ ಮಾಡಬೇಕು ಎಂದು ನೆಪವೊಡ್ಡಿ ವೈದ್ಯರು ಮುಂದೂಡುತ್ತಿದ್ದಾರೆ. ಕುಟುಂಬದವರು ಹಾಗಿದ್ದರೆ ರೋಗಿಯನ್ನು ಐಸಿಯುಗೆ ಯಾಕೆ ಶಿಪ್ಟ್ ಮಾಡಿದ್ದೀರಿ ಎಂದು ವೈದ್ಯರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಕುಟುಂಬದವರು ಗಲಾಟೆ ಮಾಡಿದ ತಕ್ಷಣ ಆಸ್ಪತ್ರೆಯವರು ಎರಡು ದಿನದ ಬಳಿಕ ಎಂಬತ್ತು ಸಾವಿರ ಬಿಲ್ ಕೊಟ್ಟು ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಅವಾಜ್ ಹಾಕಿದ್ದಾರೆ. ವೈದ್ಯರ ಈ ವರ್ತನೆಗೆ ಕುಟುಂಬಸ್ಥರು ಕಿಡಿಕಾರಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


