ಹಾವೇರಿ: ಅಮಾಯಕ ರೈತರೊಬ್ಬರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ.ಸುಲೇಮಾನ್ ಹೊಂಬರಡಿ ಹಲ್ಲೆಗೊಳಗಾದ ರೈತ. ರಾಣೇಬೆನ್ನೂರು ನಗರ ಠಾಣೆಯ ಶ್ರೀಕಾಂತ್ ಲಮಾಣಿ ಮತ್ತು ಸಚಿನ್ ಧರ್ಮರ್ ಎಂಬ ಇಬ್ಬರು ಕಾನ್ ಸ್ಟೇಬಲ್‍ಗಳು ರೈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಬಲವಂತವಾಗಿ ಠಾಣೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಅಂತಾ ಸುಲೇಮಾನ್ ಹೇಳ್ತಾರೆ.ಹಲ್ಲೆಯ ಬಳಿಕ ಸುಲೇಮಾನ್ ಅವರ ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಪರಿಣಾಮ ವೃದ್ಧ ತಂದೆ-ತಾಯಿ, ಪತ್ನಿ, ಮಕ್ಕಳಿಗೆ ಆಸರೆಯಾಗಬೇಕಾಗಿದ್ದ ರೈತ, ಈಗ ನಡೆದಾಡಲು ಅನ್ಯರ ಸಹಾಯಕ್ಕೆ ಕೈ ಚಾಚುತ್ತಿದ್ದಾರೆ.Sign in to your account
Username or Email Address


Password

 Remember Me


