ಬಳ್ಳಾರಿ: 9 ತಿಂಗಳು ಕಾಲ ಹೊಟ್ಟೆಯಲ್ಲಿ ಹೊತ್ತುಕೊಂಡು ಹೆತ್ತು ಸಾಕಿದ ಮಗನೇ ತಾಯಿ ಎದೆಗೆ ಜಾಡಿಸಿ ಒದ್ದ ಅಮಾನವೀಯ ಘಟನೆ ಹೊಸಪೇಟೆಯಲ್ಲಿ ನಡೆದಿದೆ.ಹೊಸಪೇಟೆಯ ಸರ್ದಾರ್ ಮೊಹಲ್ಲಾದಲ್ಲಿ ಮಹಮ್ಮದ್ ಗಫೂರ್ ಎಂಬಾತನೇ ತಾಯಿ ಎದೆಗೆ ಒದ್ದ ಪಾಪಿ ಮಗ. ಈತ ಆಸ್ತಿಗಾಗಿ ತನ್ನ 70 ವರ್ಷದ ಹೆತ್ತ ತಾಯಿಯನ್ನು ಒದ್ದು ವಿಕೃತಿ ಮೆರೆದಿದ್ದಾನೆ. ಕಳೆದ ಆರು ತಿಂಗಳಿನಿಂದ ಈ ದುಷ್ಟಮಗ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹಿಂಸಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.ಸೋಮವಾರ ಮತ್ತೆ ಆಸ್ತಿಗಾಗಿ ಮಗ ತಗಾದೆ ತೆಗೆದಿದ್ದು, ತಾಯಿ ಮಾಬುನ್ನಿಯನ್ನು ಕಾಲಿನಿಂದ ಒದಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಸದ್ಯ ಮಗನಿಂದ ಹಲ್ಲೆಗೆ ಒಳಗಾದ ಪುತ್ರನ ವಿರುದ್ಧ ತಾಯಿ ಹೊಸಪೇಟೆ ಬಡಾವಣೆ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


