ಚಿಕ್ಕಮಗಳೂರು: ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಭಾನುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದರು.ಭಾನುವಾರ ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಆಜಾದ್ ಪಾರ್ಕ್ ವೃತ್ತದಿಂದ ರೋಡ್ ಶೋ ಮೂಲಕ ಮಿಲನ ಚಿತ್ರಮಂದಿರಕ್ಕೆ ಆಗಮಿಸಿದರು. ಶಿವರಾಜ್ ಕುಮಾರ್ ಬರುತ್ತಾರೆಂದು ಅಭಿಮಾನಿಗಳು ಮೂರು ಗಂಟೆಯಿಂದಲೇ ಆಜಾದ್ ಪಾರ್ಕ್ ವೃತ್ತದಲ್ಲಿ ಡ್ರಮ್ ಸೆಟ್ ಬಾರಿಸಿಕೊಂಡು ಕುಣಿದು ಕುಪ್ಪಳಿಸಿದರು.ಶಿವಣ್ಣ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದು, ತೆರೆದ ವಾಹನದ ಮೇಲೆಯೇ ಹತ್ತಿ ಸೆಲ್ಫಿ ತೆಗೆದುಕೊಂಡರು. ಶಿವಣ್ಣ ಥಿಯೇಟರ್ ಬಳಿ ಆಗಮಿಸುತ್ತಿದ್ದಂತೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಶಿವಣ್ಣ ಜೊತೆಯೇ ಟಾಕೀಸ್ ಪ್ರವೇಶಿಸಲು ಯತ್ನಿಸಿದ ಅಭಿಮಾನಿಗಳನ್ನು ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ಟರು.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಹಿಟ್ ಆಗಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ ಮೆರವಣಿಗೆ ಮಾಡಿದ್ದರು.ಟಗರು ವಿಜಯೋತ್ಸವದಲ್ಲಿ ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿಯಾಗಿದ್ದು, ಶಿವಪ್ಪನಾಯಕನ ಪ್ರತಿಮಗೆ ಹೂವಿನ ಹಾರ ಹಾಕಿ ನಹೆರು ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದರು.ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್, ಧನಂಜಯ್ ಹಾಗೂ ವಶಿಷ್ಟ ಅವರನ್ನು ನೋಡಿ ಕಣ್ತುಂಬಿಕೊಂಡು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯ ಘೋಷ ಕೂಗಿದ್ದರು.Sign in to your account
Username or Email Address


Password

 Remember Me


