ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ಬೆಳ್ಳಂದೂರು ಪೊಲೀಸರು ಯುವತಿಯೊಬ್ಬಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆಂದು ಕೊಡತಿ ಬಸ್ ಡಿಪೋ ಬಳಿ ತೆರಳಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಮತ್ತು ಟೀಂ ಮೇಲೆ ಆರೋಪಿಗಳಾದ ಸೆಲ್ವಕುಮಾರ್ ಮತ್ತು ಶಂಕರ್ ದಾಳಿ ನಡೆಸಿದ್ದಾರೆ.ಮಾರ್ಚ್ 18 ರಂದು ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಮನೆ ಬಳಿ ನಿಂತಿದ್ದ ಯುವತಿಯನ್ನ ಇಂಡಿಕಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಕೊಡತಿ ಬಿಎಂಟಿಸಿ ಕ್ವಾಟ್ರಸ್ ಬಳಿ ಆರೋಪಿಗಳಿರುವ ಮಾಹಿತಿ ಆಧಾರದ ಮೇರೆಗೆ ಬಂಧಿಸಲು ಪೊಲೀಸರು ಹೋಗಿದ್ದಾರೆ. ಬೆಳ್ಳಂದೂರು ಠಾಣೆಯ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಆಂಡ್ ಟಿಂ ನಿಂದ ಕಾರ್ಯಾಚರಣೆ ಮಾಡಲಾಗಿತ್ತು.
ಈ ವೇಳೆ ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಪೇದೆ ಮಹಾಂತೇಶ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ವಿಕ್ಟರ್ ಸೈಮನ್ ಮತ್ತು ಎಸ್‍ಐ ಸೋಮಶೇಖರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಸುಮ್ಮನಿರದ ಆರೋಪಿಗಳು ಪುನಃ ಹಲ್ಲೆಗೆ ಮುಂದಾಗಿದ್ದಾರೆ. ಆಗ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.ಸದ್ಯಕ್ಕೆ ಗಾಯಗೊಂಡಿರುವ ಆರೋಪಿಗಳಾದ ಸೆಲ್ವಕುಮಾರ್, ಶಂಕರ್ ಮತ್ತು ಪೇದೆ ಮಹಾಂತೇಶ್‍ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.






 Advertisement 




Sign in to your account
Username or Email Address


Password

 Remember Me


