ಬಳ್ಳಾರಿ: ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಂದ ರೋಗಿಯ ಬಳಿ ಲಂಚ ಪಡೆದು ವೈದ್ಯರು ಸಿಕ್ಕಿಬಿದ್ದಿದ್ದಾರೆ. ಈ ದೃಶ್ಯವನ್ನು ಆಸ್ಪತ್ರೆಯಲ್ಲಿದ್ದವರು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಘಟನೆ ಜಿಲ್ಲೆಯ ಹೂವಿನಹಡಗಲಿಯ ಆಸ್ಪತ್ರೆಯಲ್ಲಿ ನಡೆದಿದೆ. ದಾಸರಹಳ್ಳಿ ತಾಂಡದ ಮಹಿಳೆ ಮೋತಿಬಾಯಿ ಅವರು ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ರೋಗಿಯ ಸಂಬಂಧಿಕರ ಬಳಿ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.ರೋಗಿಯ ಸಂಬಂಧಿ 8 ಸಾವಿರ ಕೊಡುವುದಾಗಿ ಹೇಳಿದರೂ ಒಪ್ಪದ ಶಿವಕುಮಾರ್ 10 ಸಾವಿರ ಕೊಡಲೇಬೇಕು ಎಂದು ಹೇಳಿದ್ದಾನೆ. ಕೊನೆಗೂ ಸಹಾಯಕ ಹಣವನ್ನು ಪಡೆಯುತ್ತಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.Sign in to your account
Username or Email Address


Password

 Remember Me


