ವಿಜಯಪುರ: ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದು ಹೋಗಿ ಅಂತ ದಿವ್ಯಾ ಹಾದರಗಿ ಎಂಬವರು ಸಚಿವ ಎಂ.ಬಿ ಪಾಟೀಲರಿಗೆ ಸವಾಲೆಸೆದಿದ್ದಾರೆ.ವಿಜಯಪುರದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪಿಸ್ ಪಿಸ್ ಮಾಡುತ್ತೇವೆ ಎಂದು ಎಂ.ಬಿ ಪಾಟೀಲರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿತ್ತು ಯುಪಿಎಈ ಕೃತ್ಯ ಎಸಗಲು ನಾವು ಹೆದರಲ್ಲ. ನಮ್ಮಲ್ಲಿ ಎಷ್ಟು ಜನರನ್ನು ಬೇಕಾದ್ರೂ ಜೈಲಿಗೆ ಹಾಕಿ. ಪರ್ವಾಗಿಲ್ಲ. ಆದ್ರೆ ನಾವು ಅದನ್ನು ಮಾಡೇ ಮಾಡುತ್ತೇವೆ ಅಂತ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?Sign in to your account
Username or Email Address


Password

 Remember Me


