ಮೈಸೂರು: ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಪಾಳಯದಲ್ಲಿ ಒತ್ತಡ ಹೆಚ್ಚಾಗಿದೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.ಈ ಸಂಬಂಧ ಈಗಾಗಲೇ ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಮತ್ತಿತರ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ ಎನ್ನಲಾಗಿದೆ.ವರುಣಾ ಕ್ಷೇತ್ರದಲ್ಲಿ ಒಟ್ಟು 1 ಲಕ್ಷದ 95 ಸಾವಿರ ಮತಗಳಿದ್ದು, ಅವುಗಳಲ್ಲಿ 50 ಸಾವಿರ ಲಿಂಗಾಯತ ಮತಗಳಿವೆ. ಲಿಂಗಾಯತ ಮತಗಳ ಜೊತೆಗೆ ಯುವಕರ ಮತ ಅಧಿಕವಾಗಿದ್ದು, ಕಳೆದ ಬಾರಿ ಸ್ಪರ್ಧಿಸಿದ್ದ ಸಿದ್ದಲಿಂಗಸ್ವಾಮಿ 53 ಸಾವಿರ ಮತಗಳ ಅಂತದಿಂದ ಜಯಗಳಿಸಿ, ಸಿದ್ದರಾಮಯ್ಯಗೆ ನಡುಕ ಹುಟ್ಟಿಸಿದ್ರು. ಈ ಬಾರಿ ಬಿಎಸ್‍ವೈ ಪುತ್ರ ವಿಜಯೇಂದ್ರರನ್ನು ಕಣಕ್ಕಿಳಿಸಿದ್ರೆ ಲಿಂಗಾಯತ ಮತಗಳ ಜೊತೆಗೆ ಯುವಕರ ಮತಗಳನ್ನು ಪಡೆದು, ಸಿದ್ದರಾಮಯ್ಯರನ್ನು ಸೋಲಿಸಬಹುದು ಅನ್ನೋದು ಬಿಜೆಪಿ ಲೆಕ್ಕಾಚಾರವಾಗಿದೆ.ಬಿಎಸ್‍ವೈ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಕಾದು ನೋಡೋ ತಂತ್ರಕ್ಕೆ ಶರಣಾಗಿದ್ದಾರೆ.Sign in to your account
Username or Email Address


Password

 Remember Me


