ಬೆಂಗಳೂರು: ಸೌದಿ ಅರೇಬಿಯಾ ವಿದ್ಯಾರ್ಥಿನಿಯ ಮೇಲೆ ಬ್ಯೂಟಿಷಿಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇಂದು ಬೆಳಕಿಗೆ ಬಂದಿದೆ.ಜಾವಿದ್ ಹಬೀಬ್ ಬ್ಯೂಟಿ ಪಾರ್ಲರ್ ಬ್ಯೂಟಿಷಿಯನ್ ಲಕ್ಕಿಸಿಂಗ್ ಎಂಬಾತ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಶನಿವಾರ ಕಾಲೇಜ್ ಫೆಸ್ಟ್ ಇದ್ದ ಕಾರಣ ಸೌದಿ ಮೂಲದ ವಿದ್ಯಾರ್ಥಿನಿ ಬ್ಯೂಟಿ ಪಾರ್ಲರ್ ಗೆ ತೆರಳಿದ್ದಳು. ಈ ವೇಳೆ ಅಲ್ಲಿನ ಬ್ಯೂಟಿಷಿಯನ್ ಲಕ್ಕಿಸಿಂಗ್ ವಿದ್ಯಾರ್ಥಿನಿ ಮೇಲೆ ತನ್ನ ವಿಕೃತಿ ಮೆರೆದಿದ್ದಾನೆ. ಘಟನೆಯ ಬಳಿಕ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ನಂತರ ಸ್ನೇಹಿತೆಯರ ಸಹಾಯದಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ದಾಖಲಿಸಿದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿ ಬ್ಯೂಟಿಷಿಯನ್ ನನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


