ಕೊಪ್ಪಳ: ಚಲಿಸುತ್ತಿದ್ದ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಪರಿಣಾಮ ಬಸ್ ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಬಳಿಕ ಟೋಲ್ ಗೇಟ್ ಗೆ ಗುದ್ದಿ ನಿಂತಿದೆ. ಈ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಬಳಿ ನಡೆದಿದೆ.ಬಸ್ ಚಾಲನೆ ಮಾಡುವಾಗ ನಾರಾಯಣಸ್ವಾಮಿ ಎಂಬವರಿಗೆ ಹೃದಯಾಘಾತ ಸಂಭವಿಸಿದೆ. ಇದರಿಂದ ಬಸ್ಸನ್ನು ನಿಯಂತ್ರಿಸಲು ಸಾಧ್ಯವಾಗದೆ ಬಸ್ ನೇರವಾಗಿ ಎತ್ತಿನ ಬಂಡಿಗೆ ಡಿಕ್ಕಿಯಾಗಿದೆ. ಘಟನೆಯಿಂದಾಗಿ ಚಾಲಕ ಹಾಗೂ ಎತ್ತಿನ ಬಂಡಿಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಮತ್ತು ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎತ್ತಿನ ಬಂಡಿಯಲ್ಲಿದ್ದವರು ಜಂಗಮರಕಲ್ಗುಡಿ ಗ್ರಾಮದ ಸುರೇಶ್, ಯಮನೂರಪ್ಪ ಮತ್ತು ನರಸಪ್ಪ ಎಂದು ತಿಳಿದುಬಂದಿದೆ.ಬಸ್ ಕುಕನೂರುನಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಬಸ್ ಟೋಲ್ ಗೇಟ್ ಹತ್ತಿರ ನಿಧಾನವಾಗಿ ಚಲಿಸುತ್ತಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಬಸ್ ಡಿಕ್ಕಿಯಿಂದಾಗಿ ಟೋಲ್‍ಗೇಟ್ ಸಂಪೂರ್ಣ ನಜ್ಜುಗುಜ್ಜಾಗಿದೆ.ಈ ಘಟನೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


