ಕೊಪ್ಪಳ: ಪ್ರಚಾರದ ಭರದಲ್ಲಿ ಬಿಜೆಪಿ ಕಾರ್ಯಕರ್ತರು ಎಡವಟ್ಟುವೊಂದನ್ನು ಮಾಡಿಕೊಂಡಿದ್ದಾರೆ. ಇಂದು ನಗರದಲ್ಲಿ ಆಯೋಜನೆಗೊಂಡಿರುವ ಉಜ್ವಲ್ ಪ್ಲಸ್ ಸಿಲಿಂಡರ್ ವಿತರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾಗಿರುವ ಬ್ಯಾನರ್ ಗಳಲ್ಲಿ ಎಡವಟ್ಟು ಮಾಡಲಾಗಿದೆ.ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರ ಭಾವಚಿತ್ರದೊಂದಿಗೆ ಬ್ಯಾನರ್ ಗಳು ನಗರದ ಪ್ರಮುಖ ರಸ್ತೆಯಲ್ಲಿ ರಾರಾಜಿಸುತ್ತಿವೆ. ಬ್ಯಾನರ್ ಗಳಲ್ಲಿ ಬಿ. ಶ್ರೀರಾಮುಲು ಬಳ್ಳಾರಿ ಸಂಸದರು ಎಂದು ಹೆಸರು ನಮೂದಿಸುವ ಬದಲಾಗಿ ಗದಗ ಜಿಲ್ಲಾ ಸಂಸದರು ಎಂದು ನಮೂದಿಸಲಾಗಿದೆ.ಬ್ಯಾನರ್ ಗಳನ್ನು ನೋಡಿದ ಜನರು ಅರೇ, ಯಾವಾಗ ಶ್ರೀರಾಮುಲು ಗದಗ ಸಂಸದರಾದ್ರು ಅಂತಾ ಪ್ರಶ್ನೆ ಮಾಡ್ತಿದ್ದಾರೆ.Sign in to your account
Username or Email Address


Password

 Remember Me


