ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಜೆಪಿ ಮುಖಂಡರೊಬ್ಬರ ಅನುಯಾಯಿಗಳು ಗೂಂಡಾವರ್ತನೆ ತೋರಿದ್ದಾರೆ.ಕಾಂಗ್ರೆಸ್ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಶಿವಾಜಿನಗರದ ಯೂನಿವರ್ಸಲ್ ಪೆಟ್ರೋಲ್ ಬಂಕ್ ಕ್ಯಾಷಿಯರ್‍ಗೆ ಥಳಿಸಲಾಗಿದೆ. ಪೆಟ್ರೋಲ್ ಬಂಕ್ ಮೇಲ್ಭಾಗದಲ್ಲಿ ಹಾಕಲಾಗಿದ್ದ ಸಚಿವ ರೋಷನ್ ಬೇಗ್ ಬ್ಯಾನರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.ಹಲ್ಲೆ ಆರೋಪಿ ಬಾಲಕೃಷ್ಣ ಈ ಹಿಂದೆ ಜಯಮಹಲ್ ವಾರ್ಡ್ ನಿಂದ ಕಾರ್ಪೊರೇಟರ್ ಎಲೆಕ್ಷನ್ ಗೆ ನಿಂತು ಸೋತಿದ್ದನು. ಶುಕ್ರವಾರ ರಾಜು ಜೊತೆ ಸೇರಿ ಪೆಟ್ರೋಲ್ ಬಂಕ್‍ಗೆ ಬಂದು ದೊಣ್ಣೆಯಿಂದ ಅಲ್ಲಿದ್ದವರನ್ನು ಬೆದರಿಸಿದ್ದಾನೆ.ಈ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಸದ್ಯ ಅರೋಪಿ ಬಾಲಕೃಷ್ಣ ನನ್ನು ಅರೆಸ್ಟ್ ಮಾಡಿರುವ ಶಿವಾಜಿನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.https://www.youtube.com/watch?v=NUMLZJGk3tYSign in to your account
Username or Email Address


Password

 Remember Me


