ಶಿವಮೊಗ್ಗ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ವೃದ್ಧರೊಬ್ಬರು ಕೆಳಗೆ ಬಿದ್ದಿದ್ದು, ಈ ವೇಳೆ ಕಾರು ನಿಲ್ಲಿಸದ ಚಾಲಕ ವೃದ್ಧರ ಮೇಲೆಯೇ ಕಾರು ಚಲಾಯಿಸಿಕೊಂಡು ಪರಾರಿಯಾಗಿರುವ ಅಮಾನವೀಯ ಟನೆ ಜಿಲ್ಲೆಯ ಹರಿಗೆ ಗ್ರಾಮದ ಬಿ.ಹೆಚ್. ರಸ್ತೆಯಲ್ಲಿ ನಡೆದಿದೆ.ಹರಿಗೆ ಗ್ರಾಮದ ನಿವಾಸಿಯಾದ 72 ವರ್ಷದ ಕೃಷ್ಣಮೂರ್ತಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣಮೂರ್ತಿ ತಮ್ಮ ಮೊಮ್ಮಗ ಸಾತ್ವಿಕ್ ಜೊತೆ ಮಲವಗೊಪ್ಪದಿಂದ ಶಿವಮೊಗ್ಗ ಕಡೆಗೆ ಟಿವಿಎಸ್ ಮೊಪೆಡ್ ನಲ್ಲಿ ಬರುವಾಗ ಈ ಘಟನೆ ನಡೆದಿದೆ.ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕೃಷ್ಣಮೂರ್ತಿ ಅವರು ಕಾರಿನ ಬ್ಯಾನೆಟ್ ಮೇಲೆ ಬಿದ್ದು ಕೆಳಗೆ ಉರುಳಿದ್ದಾರೆ. ಈ ಸಂದರ್ಭದಲ್ಲಿ ಕಾರು ನಿಲ್ಲಿಸದ ಚಾಲಕ, ಕೃಷ್ಣಪ್ಪ ಅವರ ಮೇಲೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.ಈ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ಈ ಅಮಾನುಷ ಕೃತ್ಯವನ್ನು ಕೃಷ್ಣಮೂರ್ತಿ ಮನೆಯವರು ಖಂಡಿಸಿದ್ದಾರೆ. ಘಟನೆ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧಾರಿಸಿ ಅಪಘಾತ ನಡೆಸಿದ ಕಾರು ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.https://www.youtube.com/watch?v=4WjtpdGY3H0Sign in to your account
Username or Email Address


Password

 Remember Me


