ಬೆಂಗಳೂರು: ಮಹದಾಯಿ ಹೋರಾಟದ ವೇಳೆ ರೈತರ ಮೇಲೆ ಹಾಕಿದ್ದ ಕೇಸ್‍ಗಳನ್ನು ಸರ್ಕಾರ ಹಿಂಪಡೆದಿದೆ.ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನರಗುಂದ, ನವಲಗುಂದ, ಗದಗ ಭಾಗಗಳು ಸೇರಿದಂತೆ ವಿವಿಧ ಕಡೆ ರೈತರ ಮೇಲೆ ಹಾಕಿದ್ದ 60ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದೆ ಪಡೆದಿದೆ. ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಸರ್ಕಾರದ ಕ್ರಮ ರಾಜಕೀಯ ಬಣ್ಣ ಪಡೆದುಕೊಂಡಿದೆ.ರೈತರು, ವಿವಿಧ ಸಂಘಟನೆಗಳು, ಕೋಮು ಗಲಭೆಗಳಲ್ಲಿ ಭಾಗವಹಿಸಿದ್ದ ಬರೋಬ್ಬರಿ 127 ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟ ಒಪ್ಪಿಗೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.Sign in to your account
Username or Email Address


Password

 Remember Me


