ಬೆಂಗಳೂರು: ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರೂ, ಇತ್ತೀಚಿನ ದಿನಗಳಲ್ಲಿ ಸಿನಿಮಾಗೆ ಕೊಡುವಷ್ಟೇ ಪ್ರಾಮುಖ್ಯತೆ ಫ್ಯಾಮಿಲಿಗೂ ನೀಡುತ್ತಿದ್ದಾರೆ.ಸುದೀಪ್ ಮಗಳ ಶಾಲೆಯ ವಾರ್ಷಿಕೋತ್ಸವ, ಬರ್ತ್‍ಡೇ ಪಾರ್ಟಿ ಹೀಗೆ ಕೆಲಸದ ಬ್ಯುಸಿಯಲ್ಲಿಯೂ ಬಿಡುವು ಮಾಡಿಕೊಂಡು ಕುಟುಂಬಸ್ಥರಿಗಾಗಿ ಸಮಯ ನೀಡುತ್ತಿದ್ದಾರೆ. ತಾನಷ್ಟೇ ಅಲ್ಲದೆ ತನ್ನ ಸುತ್ತಮುತ್ತಲಿನವರನ್ನೂ ಖುಷಿಯಿಂದ ನೋಡಿಕೊಳ್ಳಬೇಕು ಎನ್ನುವ ಉದ್ದೇಶ ಸುದೀಪ್ ಅವರಿಗೆ ಇದೆ.ಕಿಚ್ಚ ಸುದೀಪ್ ತನ್ನ ಸೊಸೆಯ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಸಹೋದರಿ ಸುಜಾತ ಸಂಜೀವ್ ಅವರ ಪುತ್ರಿ ಶ್ರೇಯಾ ಅವರ ಹುಟ್ಟುಹಬ್ಬಕ್ಕೆ ಸುದೀಪ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.ಶ್ರೇಯಾಗೆ ಮಾವ ಸುದೀಪ್ ಅವರಿಂದ ಕಪ್ಪು ಬಣ್ಣದ ಜೀಪ್ ಉಡುಗೊರೆಯಾಗಿ ಸಿಕ್ಕಿದೆ. ಸುಜಾತ ಸಂಜೀವ್ ಅವರಿಗೆ ಒಬ್ಬ ಪುತ್ರ ಕೂಡ ಇದ್ದು, ಸಂಚಿತ್ ಸಂಜೀವ್ ಮಾವನಂತೆ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಈಗಾಗಲೇ ಕೆಲಸ ಆರಂಭ ಮಾಡಿದ್ದಾರೆ.ಸುದೀಪ್ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಸೇರಿ ಸ್ಪೆಷಲ್ ಆಗಿ ಆಚರಿಸುತ್ತಾರೆ. ಅದೇ ರೀತಿ ಕಿಚ್ಚ ತಮ್ಮ ಮನೆಯವರ ಹುಟ್ಟು ಹಬ್ಬವನ್ನು ಕೂಡ ವಿಶೇಷವಾಗಿ ಆಚರಣೆ ಮಾಡಿದ್ದು, ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.Sign in to your account
Username or Email Address


Password

 Remember Me


