ಬಳ್ಳಾರಿ: ಉಡುಪಿಯ ಪೇಜಾವರ ಶ್ರೀಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶವಾಗಿ ಮಾಡಿದೆ.ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸರ್ವ ಧರ್ಮ ರಥೋತ್ಸವ ಕಾರ್ಯಕ್ರಮದ ಬಳಿಕ ಶಿವಮೊಗ್ಗಕ್ಕೆ ತೆರಳುವ ವೇಳೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ಕೂಡಲೇ ಎಚ್ಚೆತ್ತ ಪೈಲೆಟ್ ಕಾಪ್ಟರನ್ನು ಹಡಗಲಿ ತಾಲೂಕಿನ ಹೊಳಲು ಗ್ರಾಮದ ಸಾಧನಾ ಶಾಲಾ ಮೈದಾನದಲ್ಲಿ ಇಳಿಸಿದ್ದಾರೆ. ಈ ಮೂಲಕ ನಡೆಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶವಾಗುತ್ತಿದ್ದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಸ್ಥಳಕ್ಕೆ ಧಾವಿಸಿ ಶ್ರೀಗಳನ್ನು ವಿಚಾರಿಸಿದ್ದಾರೆ. ಸುಮಾರು ಅರ್ಧ ಗಂಟೆ ಬಳಿಕ ಕಾಪ್ಟರ್ ತಾಂತ್ರಿಕ ದೋಷ ಸರಿಪಡಿಸಿ ಮತ್ತೆ ಶ್ರೀಗಳು ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ.Sign in to your account
Username or Email Address


Password

 Remember Me


