ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳನ್ನು ಮಣಿಸಲು ಸ್ಟಾರ್ ಕ್ಯಾಂಪೇನ್ ಅಖಾಡ ರೆಡಿಯಾದಂತಿದೆ.ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ತಮ್ಮ ಗೆಲುವಿಗಾಗಿ ಚಿತ್ರನಟರ ಮೊರೆಹೋಗಿರುವಂತೆ ಕಾಣುತ್ತಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದು, ನೆಲಮಂಗಲದಲ್ಲಿ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಕಿಚ್ಚ ಸುದೀಪ್ ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಎಚ್‍ಡಿಕೆಗೆ ಕೈಯಾರೆ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್ಶಾಸಕ ಶ್ರೀನಿವಾಸಮೂರ್ತಿ ಹಾಗೂ ಕಿಚ್ಚ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುದೀಪ್ ಕೂಡ 2018ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಈ ನಡುವೆ ಅಭ್ಯರ್ಥಿಗಳ ಗೆಲುವಿಗಾಗಿ ಸ್ಟಾರ್ ಕ್ಯಾಂಪೇನ್ ನಲ್ಲಿ ನಟರ ಬಳಕೆ ಈಗಿನಿಂದಲೇ ರಂಗೇರುತ್ತಿದೆ. ಇದನ್ನೂ ಓದಿ: ಜೆಡಿಎಸ್‍ನ ಸ್ಟಾರ್ ಪ್ರಚಾರಕರಾಗಿ ನಟ ಪವನ್ ಕಲ್ಯಾಣ್- ಪವರ್ ಸ್ಟಾರ್ ಗೆ ನಿಖಿಲ್ ಕುಮಾರಸ್ವಾಮಿ ಸಾಥ್ಈ ಹಿಂದೆ ಸುದೀಪ್ ಚುನವಾಣೆಗೆ ಸ್ಪರ್ಧೆ ಮಾಡದೇ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವೇಳೆ ಕಿಚ್ಚ ಭೇಟಿಯಾಗಿದ್ದರು. ಈ ವೇಳೆ ಸುದೀಪ್ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದರೆ ಪ್ರಚಾರ ಮಾಡುವ ಮನಸ್ಸಿದೆ ಎಂದು ಹೇಳಿದ್ದರು. ನಾಯಕ ಸಮುದಾಯದ ಮತಗಳನ್ನು ಸೆಳೆಯೋಕೆ ಕಿಚ್ಚನನ್ನು ಬಳಸಿಕೊಳ್ಳೋಕೆ ಜೆಡಿಎಸ್ ಕೂಡ ಒಳಗೊಳಗೇ ಸಿದ್ಧತೆ ಮಾಡಿಕೊಂಡಿತ್ತು ಎಂದು ಹೇಳಲಾಗಿತ್ತು.ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಯ ಸುತ್ತಮುತ್ತ ಭಾಗಗಳಲ್ಲಿ ಜೆಡಿಎಸ್ ಪರವಾಗಿ ಸುದೀಪ್ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?Sign in to your account
Username or Email Address


Password

 Remember Me


