ತುಮಕೂರು: ಏಕಾಏಕಿ ಬೃಹದಾಕಾರದ ಮರ ಕಾರಿನ ಮೇಲೆ ಉರುಳಿಬಿದ್ದ ಘಟನೆ ತುಮಕೂರು ತಾಲೂಕಿನ ಹನುಮಂತ ನಗರದಲ್ಲಿ ನಡೆದಿದೆ.ಮರ ಉರುಳಿ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುತ್ತದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.ಪ್ರಯಾಣಿಕರು ಕುಣಿಗಲ್ ಹಾಗೂ ಚಿಕ್ಕಮಗಳೂರಿನವರೆಂದು ತಿಳಿದುಬಂದಿದೆ. ತುಮಕೂರಿನ ಕ್ಯಾತಸಂದ್ರ ದರ್ಗಾಕ್ಕೆ ಭೇಟಿ ಕೊಟ್ಟು ಕುಣಿಗಲ್ ಗೆ ವಾಪಸ್ ಆಗುವಾಗ ಈ ಘಟನೆ ನಡೆದಿದೆ.ಗಾಯಗಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಬ್ಬೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.







 Advertisement 











 Advertisement 




Sign in to your account
Username or Email Address


Password

 Remember Me


