ಬೆಂಗಳೂರು: ಕನ್ನಡ ರ‍್ಯಾಪರ್​ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದ ನಂತರ ಅವರ ಹಾಡುಗಳಿಗೆ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.ಸದ್ಯಕ್ಕೆ ಚಂದನ್ ಹಾಡಿಗೆ ಮಾತ್ರವಲ್ಲದೆ ಅವರ ಹೇರ್ ಸ್ಟೈಲ್ ನೋಡಿ ಕೂಡ ಕನ್ನಡದ ನಟಿ ಶೃತಿಹರಿಹರನ್ ಮಾರು ಹೋಗಿದ್ದಾರೆ. ರ‍್ಯಾಪರ್​ ಚಂದನ್ ಶೆಟ್ಟಿ ಆಗಾಗ ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಶೆಟ್ರು ಒಂದು ಹೊಸ ಕೇಶವಿನ್ಯಾಸದೊಂದಿಗೆ ಬಂದಿದ್ದಾರೆ.ನಟಿ ಶೃತಿ ಹರಿಹರನ್ ಗೆ ಚಂದನ್ ಹೇರ್ ಸ್ಟೈಲ್ ಸಖತ್ ಇಷ್ಟ ಆಗಿದೆ. ಆದ್ದರಿಂದ ಶೃತಿ ತಮ್ಮ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಜೊತೆಗೆ ತೆಗೆಸಿಕೊಂಡ ಫೋಟೋ ಹಾಕಿದ್ದು, ಅವರ ಹೇರ್ ಸ್ಟೈಲ್ ಬಗ್ಗೆ ಬರೆದಿದ್ದಾರೆ. ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಅವರ ಫ್ಯಾನ್ಸ್ ಗಳಿಗೂ ಕೂಡ ಮೆಚ್ಚುಗೆಯಾಗಿದೆ.ಚಂದನ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಗೆದ್ದ ನಂತರ ಖಾಸಗಿ ವಾಹಿನಿಯ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಂದಿದ್ದು, ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಮತ್ತು ಮಯೂರಿ ಚಂದನ್ ಗೆ ಸಾಥ್ ನೀಡಿದ್ದಾರೆ.https://www.instagram.com/p/BgkRybhBvzq/?hl=en&taken-by=sruthi_hariharan22Sign in to your account
Username or Email Address


Password

 Remember Me


