ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಿರ್ಮಾಪಕಿ ಜಯಶ್ರೀ ದೇವಿ ಅವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಸುಮಾರು 11 ವರ್ಷಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಶ್ರೀಯವರ ಬಂಧನವಾಗಿದೆ.ಜಯಶ್ರೀ ದೇವಿ ಅವರು ಸಿನಿಮಾ ನಿರ್ಮಾಣಕ್ಕಾಗಿ 34 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ರು, ಆದ್ರೆ ಹಿಂದಿರುಗಿಸಿಲ್ಲ. ಸಾಲದ ಹಣವನ್ನು ಕೇಳಿದಾಗ ನೀಡಿದ್ದ ಚೆಕ್ ಸಹ ಬೌನ್ಸ್ ಆಗಿದೆ ಅಂತಾ ಎಂದು `ಅಶ್ವಿನಿ ಪಿಕ್ಚರ್ಸ್’ ಸಂಸ್ಥೆ ಮಾಲೀಕ ಆನಂದ್, 18ನೇ ಎಸಿಎಂಎಂ ನ್ಯಾಯಾಲಯದಲ್ಲಿ 11 ವರ್ಷಗಳ ಹಿಂದೆ ಖಾಸಗಿ ಮೊಕದ್ದಮೆ ಹೂಡಿದ್ದರು.ಈ ಸಂಬಂಧ ಚಾಮರಾಜಪೇಟೆ ಪೊಲೀಸರು ಜಯಶ್ರೀ ದೇವಿ ಅವರನ್ನು ಬಂಧಿಸಿದ್ದಾರೆ. 1997ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ ‘ನಮ್ಮೂರ ಮಂದಾರ ಹೂವೆ’ ಮತ್ತು 2016ರಲ್ಲಿ ತೆರೆಕಂಡಿದ್ದ ಸುದೀಪ್ ಮತ್ತು ಉಪೇಂದ್ರ ಅಭಿನಯದ ‘ಮುಕಂದ ಮುರಾರಿ’ ಸಿನಿಮಾ, ಶ್ರೀ ಮಂಜುನಾಥ್, ವಂದೇ ಮಾತರಾಂ ಸೇರಿದಂತೆ ಹಲವು ಚಿತ್ರಗಳನ್ನು ಜಯಶ್ರೀ ದೇವಿ ಅವರು ನಿರ್ಮಾಣ ಮಾಡಿದ್ದರು.Sign in to your account
Username or Email Address


Password

 Remember Me


