ಮೈಸೂರು: ಇಲ್ಲಿನ ಮೃಗಾಲಯದಲ್ಲಿ ಭಾರೀ ಅವಘಡವೊಂದು ನಡೆದಿದೆ. ಮೊಸಳೆಯೊಂದು ಮೃಗಾಲಯದ ಕಾರ್ಮಿಕನ ಕಾಲು ಕಚ್ಚಿ ತಿಂದ ಆಘಾತಕಾರಿ ಘಟನೆ ಮೊಸಳೆ ಮನೆಯಲ್ಲಿ ನಡೆದಿದೆ.ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇತ್ತು. ಹೀಗಾಗಿ ಮೊಸಳೆ ಮನೆಯ ಕಾರ್ಮಿಕ ಪುಟ್ಟಸ್ವಾಮಿ ಶುಚಿತ್ವದ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ಸಾಗುವಾಗ ಪುಟ್ಟಸ್ವಾಮಿ ಎಡವಿ ಬಿದ್ದಿದ್ದಾರೆ. ಈ ವೇಳೆ ಗಾಬರಿಗೊಂಡ ಮೊಸಳೆ ಪುಟ್ಟಸ್ವಾಮಿ ಮೇಲೆ ದಾಳಿ ಮಾಡಿದೆ.ಪರಿಣಾಮ ಬಲಗಾಲಿನ ಎರಡು ಬೆರಳುಗಳನ್ನು ಕಚ್ಚಿತಿಂದಿದೆ. ತಕ್ಷಣ ಇತರೆ ಕಾರ್ಮಿಕರಿಂದ ಪುಟ್ಟಸ್ವಾಮಿಯ ರಕ್ಷಣೆ ಮಾಡಿದ್ದು, ಗಾಯಗೊಂಡ ಪುಟ್ಟಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.ಸದ್ಯ ಬಲಗಾಲಿನ ಎರಡು ಬೆರಳುಗಳನ್ನು ಕಳೆದುಕೊಂಡ ಕಾರ್ಮಿಕ ಪುಟ್ಟಸ್ವಾಮಿ, 3 ವರ್ಷದಿಂದ ಮೊಸಳೆ ಮನೆಯಲ್ಲೆ ಕೆಲಸ ಮಾಡುತ್ತಿದ್ದರು. 125 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಮಿಕನ ಮೇಲೆ ಪ್ರಾಣಿ ದಾಳಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.Sign in to your account
Username or Email Address


Password

 Remember Me


