ಚಿತ್ರದುರ್ಗ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಈ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಬಳಿಯ ಕಲ್ಲಿನ ಕ್ವಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮಾರ್ಚ್ 16 ರಂದು ಬಾಲಕ ಅಭಿಲಾಷ್(04) ನಾಪತ್ತೆಯಾಗಿದ್ದನು.ಕಡೂರು ಗ್ರಾಮದ ಚಂದ್ರಶೇಖರ್ ಎಂಬುವರ ಪುತ್ರ ಅಭಿಲಾಷ್ ಅಮಾವಾಸ್ಯೆ ಮುನ್ನಾದಿನ ನಾಪತ್ತೆಯಾಗಿದ್ದನು. ಆದರೆ 5 ದಿನದ ಬಳಿಕ ಇಂದು ಕಲ್ಲಿನ ಕ್ವಾರಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ್ನು ಅಪಹರಿಸಿ ವಾಮಾಚಾರಕ್ಕೆ ಬಾಲಕನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ.ಈ ಘಟನೆ ಚಿಕ್ಕಜಾಜೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Sign in to your account
Username or Email Address


Password

 Remember Me


