ಮಂಡ್ಯ: ಕುಡಿದ ಮತ್ತಿನಲ್ಲಿ ಕೈಯಲ್ಲಿ ಲಾಂಗ್ ಹಿಡಿದುಕೊಂಡು ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವಕರ ತಂಡ ಕೆಎಸ್‍ಆರ್‍ಟಿಸಿ ಬಸ್ ಕಿಟಕಿಯ ಗಾಜನ್ನು ಒಡೆದು ಹಾಕಿರುವ ಘಟನೆ ಮಂಡ್ಯದ ಗೋಪಾಲಪುರ ಗ್ರಾಮದ ಬಳಿ ನಡೆದಿದೆ.ನಾಗಮಂಗಲ-ಮಂಡ್ಯ ರಸ್ತೆಯಲ್ಲಿ ಬರುವ ಗೋಪಾಲಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಮೂವರು ಯುವಕರು ಕುಡಿದ ಮತ್ತಿನಲ್ಲಿ, ನಡು ರಸ್ತೆಯಲ್ಲೇ ಮಚ್ಚು ಹಿಡಿದುಕೊಂಡು ರಂಪಾಟ ನಡೆಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಕೆಎಸ್‍ಆರ್‍ಟಿಸಿ ಬಸ್‍ನ ಕಿಟಕಿ ಗಾಜನ್ನು ಕೂಡ ಒಡೆದು ಹಾಕಿದ್ದಾರೆ.ಸ್ವಲ್ಪ ಸಮಯದ ನಂತರ ಮೂವರು ಯುವಕರು ಬೈಕ್ ಹತ್ತಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ. ಯುವಕರ ರಂಪಾಟವನ್ನು ಬಸ್‍ನಲ್ಲಿದ್ದವರೊಬ್ಬರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ.ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಆತಂಕ ಸೃಷ್ಟಿಸುವ ಯುವಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.https://www.youtube.com/watch?v=-rLICI9NxMcSign in to your account
Username or Email Address


Password

 Remember Me


