ಬೆಂಗಳೂರು: ಸಿದ್ದರಾಮಯ್ಯ (Siddaramaiah) ನಂತರ ಡಿ.ಕೆ.ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗಬೇಕು ಎಂದು ಮದ್ದೂರು ಕಾಂಗ್ರೆಸ್ ಶಾಸಕ‌ ಕದಲೂರು ಉದಯ್ ಗೌಡ (Udaya Gowda) ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತಮಾಡಿದ ಅವರು, ಸಿಎಂ (Chief Minister) ಕುರ್ಚಿ ಖಾಲಿ ಇಲ್ಲ ರೇಸ್ ಎಲ್ಲಿಂದ ಬರುತ್ತೆ? ಹಿಂದೆಯೂ ಸಿದ್ದರಾಮಯ್ಯ ಪೂರ್ಣಾವಧಿ ಸರ್ಕಾರ ನಡೆಸಿದ್ದಾರೆ. ಈಗಲೂ ಒಳ್ಳೆ ಆಡಳಿತ ಕೊಡುತ್ತಿದ್ದಾರೆ ಡಿಸಿಎಂ ಸಹಾ ಸಹಕರಿಸುತ್ತಿದ್ದಾರೆ. ಅಂತಹ ಸಂದರ್ಭ ಬಂದರೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಈಗ ಪರಮೇಶ್ವರ್ (Parameshwar) ಹೆಸರು ಯಾರೋ ಹೇಳಿರಬಹುದು. ಇನ್ನೊಬ್ಬರ ಹೆಸರು ಹೇಳಿರಬಹುದು. ಪಕ್ಷದಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ (KPCC) ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರಿಗೆ ಅಂದೇ ಅವಕಾಶ ಸಿಗಬೇಕಿತ್ತು. ಕಾರಾಣಾಂತರಗಳಿಂದ ಸಿಗಲಿಲ್ಲ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕಷ್ಟ ಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗ್ತಾರೆ; AICC ಸೂಚನೆಗೆ ಹೆದರಲ್ಲ: ಕೆಎನ್ ರಾಜಣ್ಣ ಸಂಚಲನದ ಹೇಳಿಕೆಪಕ್ಷಕ್ಕೆ ಹಿನ್ನಡೆಯಾದಾಗ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕ ಮೇಲೆ‌ ಸಾಕಷ್ಟು ಶ್ರಮ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಅವರೆ ಸಿಎಂ ಆಗಬೇಕು. ಇದು ನನ್ನ ಅಭಿಲಾಷೆ ಹಾಗೂ ನನ್ನ ಇಚ್ಚೆ. ಶೇ.100 ನನ್ನ ಆಯ್ಕೆ ಡಿ.ಕೆ.ಶಿವಕುಮಾರ್. ಯಾವುದೇ ಒಪ್ಪಂದದ ಬಗ್ಗೆ ನಾವು ಇಲ್ಲಿ ಮಾತನಾಡಲು ಆಗುವುದಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು. ಯಾರ ಮನಸ್ಥಿತಿ ಏನೋ ಗೊತ್ತಿಲ್ಲ‌. ಹಿಂದೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಅವಕಾಶ ಇತ್ತು. ಆದರೆ ಅವತ್ತು ಹೈಕಮಾಂಡ್ ಏನೋ ಒಂದು ತೀರ್ಮಾನ ಮಾಡಿರುತ್ತದೆ. ಈಗ ಏನೇ ತೀರ್ಮಾನ ಮಾಡಿದರೂ ಹೈಕಮಾಂಡ್ ಮಾಡುತ್ತದೆ. ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು ಎನ್ನುವುದು ನಮ್ಮ ಆಸೆ ಕೂಡ ಎಂದಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


