ಹುಬ್ಬಳ್ಳಿ: ಗಂಡ-ಹೆಂಡತಿ ಜಗಳದ ನಡುವೆ ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ಕೋಟಿಲಿಂಗೇಶ್ವರ (Kotlingeshwara) ನಗರದಲ್ಲಿ ನಡೆದಿದೆ.ನಿಖಿಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್, ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆದರೆ ಗಂಡ-ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೇ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು.ನನ್ನ ಸಹೋದರನ ಆತ್ಮಹತ್ಯೆಗೆ ಪತ್ನಿ ಪ್ರೀತಿ ಕುಟುಂಬಸ್ಥರು ಮತ್ತು ಪೊಲೀಸರೇ ಕಾರಣ: ನಿಖಿಲ್‌ ಸಹೋದರ ರಘುವೀರ #Hubballi #Police #KarnatakaPolice @DgpKarnataka @DrParameshwara pic.twitter.com/wWxzt8dw16— PublicTV (@publictvnews) November 3, 2023 ನಿಖಿಲ್ ಪತ್ನಿ ಪ್ರೀತಿ ಮತ್ತು ಕುಟುಂಬಸ್ಥರು ಗುರುವಾರ ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಸಿ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿಬಂದಿದೆ. ನೋಟಿಸ್ ನೀಡಿ ನಿಖಿಲ್‍ನನ್ನು ಠಾಣೆ ಕರೆಸಿ ಪೊಲೀಸರು ಮಾನಸಿಕ ಕಿರುಕುಳ ನೀಡಿದ್ದಾರೆ. ಒಂದೇ ದಿನದಲ್ಲಿ 2 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿ ಪೊಲೀಸರು ನಿಖಿಲ್‍ನನ್ನು ಬಿಟ್ಟು ಕಳುಹಿಸಿದ್ದರು. ಇದನ್ನೂ ಓದಿ: ನಾನು ಯಾವತ್ತೂ ಮಂಡ್ಯ ಬಿಡಲ್ಲ, ರಕ್ತದಲ್ಲಿ ಬರೆದು ಕೊಡಬೇಕಾ: ಸುಮಲತಾ ಪ್ರಶ್ನೆಇದರಿಂದ ಮನನೊಂದು ಮನೆಗೆ ಬಂದ ನಿಖಿಲ್ ಇಂದು ಬೆಳಗ್ಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ರಘುವೀರ್‌ ಗಂಭೀರ ಆರೋಪ ಮಾಡುತ್ತಿದ್ದಾರೆ.  ನಿಖಿಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


