ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮವನ್ನು ಒಡೆದಿದ್ದಾರೆ ಅಂತಾನೂ ಹೇಳಲ್ಲ. ಒಡೆದಿದ್ದಾರೆ ಅಂತಾನೂ ಹೇಳಲ್ಲ. ಸಿಎಂ ಏನು ಮಾಡ್ಬೇಕು ಎಂಬುದನ್ನು ಬುದ್ದಿವಂತಿಕೆಯಿಂದ ಮಾಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರೋ ತಮ್ಮ ಮನೆಯಲ್ಲಿ ನಡೆದ ಸಭೆ ಬಳಿಕ ಮಾತಾಡಿದ ಯಡಿಯೂರಪ್ಪವರು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುರ್ತಾಗಿ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಬೇಕು. ಸಭೆಯಲ್ಲಿ ಎಲ್ಲ ಹಿರಿಯರನ್ನು ಮತ್ತು ಸ್ವಾಮೀಜಿಗಳನ್ನು ಕರೆದು ಸರ್ಕಾರದ ನಿರ್ಧಾರದ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಶಾಮನೂರು ಶಿವಶಂಕರಪ್ಪ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಅಂತಾ ಅಂದ್ರು.ಶಾಮನೂರು ಶಿವಶಂಕರಪ್ಪವರು ನೀಡುವ ಹೇಳಿಕೆಗಳು ವೈಯಕ್ತಿಕ ಅಲ್ಲ. ವೀರಶೈವ ಮಹಾಸಭೆ ಮುಂದಿನ ಭವಿಷ್ಯಕ್ಕಾಗಿ ಸೂಕ್ತ ತೀರ್ಮಾಣ ತೆಗದುಕೊಳ್ಳಬೇಕಿದೆ. ವೀರಶೈವ ಮಹಾಸಭೆಯ ನಿರ್ಣಯದ ನಂತರ ಬಿಜೆಪಿ ತನ್ನ ನಿಲುವನ್ನು ಪ್ರಕಟಿಸಲಿದೆ ಅಂತಾ ಬಿ.ಎಸ್.ಯಡಿಯೂರಪ್ಪ ಹೇಳಿದರು. Sign in to your account
Username or Email Address


Password

 Remember Me


