ಹಾವೇರಿ: ನವಜಾತ ಶಿಶುವನ್ನು ಚೀಲದಲ್ಲಿ ಹಾಕಿ, ಜಮೀನಿನ ಬಳಿ ಎಸೆದು ಹೋದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದ ಬಳಿ ನಡೆದಿದೆ.ಗ್ರಾಮದ ಮಹಿಳೆಯರು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯೋರ್ವರು ಚೀಲವನ್ನ ಗಮನಿಸಿದಾದ ಚೀಲದಲ್ಲಿ ಮಗು ಇರೋದು ಬೆಳಕಿಗೆ ಬಂದಿದೆ. ಜೀವಂತವಾಗಿರೋ ನವಜಾತ ಗಂಡು ಶಿಶುವನ್ನ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ನೀಡಲಾಗುತ್ತದೆ.ಬೆಟಗೇರಿ ಗ್ರಾಮದ ಬಳಿ ಇರೋ ಚಿಕ್ಕೇರೂರು ಗ್ರಾಮದ ಸರಕಾರಿ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಲಾಗುತ್ತಿದೆ. ನವಜಾತ ಗಂಡು ಶಿಶುವನ್ನ ಚೀಲದಲ್ಲಿ ಎಸೆದುಹೋದ ನಿಷ್ಕರುಣಿ ಪೋಷಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಚೀಲದಲ್ಲಿ ಮಗುವನ್ನ ಹಾಕಿ ಎಸೆದು ಹೋದ ಪೋಷಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.Sign in to your account
Username or Email Address


Password

 Remember Me


