ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಫಸ್ಟ್ ಆಫ್ ನಲ್ಲಿ ಡಿಫ್ರೆಂಟ್ ಆಗಿರುವ ಕಾರ್ ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಅದರೆ ಸೆಕೆಂಡ್ ಆಫ್ ನಲ್ಲಿ ಬುಲೆಟ್ ನೋಡಿ ಸಾಕಷ್ಟು ಜನರು ಫಿದಾ ಆಗಿದ್ದರು.ಸಿನಿಮಾದ ಕಾರನ್ನು ಹರಾಜು ಹಾಕಿ ಎನ್‍ಜಿಒ ಸಂಘಟನೆಗೆ ನೀಡಲಾಗಿತ್ತು. ಆದರೆ ಬುಲೆಟ್ ಬೈಕಿನ ಕಥೆ ಏನಾಯ್ತು ಎನ್ನುವುದು ತಿಳಿದು ಬಂದಿರಲಿಲ್ಲ. ಯಾಕೆಂದರೆ ಅದು ರಕ್ಷಿತ್ ಶೆಟ್ಟಿ ಅವರ ಬಳಿ ಅಥವಾ ರಿಷಬ್ ಶೆಟ್ಟಿ ಅವರ ಹತ್ತಿರ ಇರುತ್ತದೆ ಎಂದು ಕೊಂಡಿದ್ದರು. ಆದರೆ ಈಗ ಕಿರಿಕ್ ಪಾರ್ಟಿ ಬೈಕ್ ಅವತಾರ ನೋಡಿದರೆ ಮತ್ತೆ ಅದರ ಮೇಲೆ ಪ್ರೀತಿಯ ಆಗುವ ರೀತಿ ಹೊಸ ಲುಕ್ ಪಡೆದುಕೊಂಡಿದೆ.ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಓಡಿಸಿದ್ದ ಬೈಕಿಗೆ ಈಗ ರಾಯಲ್ ಲುಕ್ ಸಿಕ್ಕಿದೆ. ಈ ರೀತಿಯೂ ಬೈಕ್ ರೆಡಿ ಮಾಡಿಸಬಹುದಾ ಎನ್ನುವ ಮಟ್ಟಿಗೆ ಬೈಕ್ ಲುಕ್ ಬದಲಾಗಿದೆ. ಬಾಟಲ್ ಗ್ರೀನ್ ಕಲರ್ ಇದ್ದ ಬೈಕ್ ಈಗ ರೆಡ್ ಕಲರ್ ಆಗಿ ಬದಲಾಗಿದೆ. ಬುಲೆಟರ್ ಕಸ್ಟಮ್ ಮೋಟಾರ್ ಸೈಕಲ್ ತಂಡ ರಕ್ಷಿತ್ ಅವರ ಹಿಂದಿನ ಬೈಕ್ ಗೆ ಹೊಸ ಟಚ್ ನೀಡಿದ್ದಾರೆ.ಹೊಸದಾಗಿ ಬೈಕ್ ರೆಡಿಯಾಗಿರುವ ಬಗ್ಗೆ ರಕ್ಷಿತ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ಬೈಕ್ ನ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯುಗಾದಿ ಹಬ್ಬದಂದೆ ಬಂದ ಹೊಸ ಬೈಕ್ ನಲ್ಲಿ ಒಂದು ರೈಡ್ ಕೂಡ ಹೋಗಿ ಬಂದಿದ್ದಾರೆ.ಈ ಹೊಸ ಬೈಕಿಗೆ ಸಿಂಗಲ್ ಸೀಟ್ ಇದೆ. ಈ ರೀತಿ ಮಾಡಿಫಿಕೇಷನ್ ಆದ ಬೈಕ್ ಗಳಿಗೆ ಸಿಂಗಲ್ ಸೀಟ್ ಇದ್ದರೆ ಚೆಂದ ಎಂದು ಬೈಕಿನ ಲುಕ್ ಬದಲಾಯಿಸಿದವರು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


