ಹುಬ್ಬಳ್ಳಿ: ರಾಷ್ಟ್ರೀಯ ಪಕ್ಷದ ಮುಖಂಡನ ಸೋದರನೊಬ್ಬ ತನ್ನ ಸಹಚರರ ಜೊತೆ ಬಾರ್ ನಲ್ಲಿ ಗಲಾಟೆ ಮಾಡಿ, ಕಂಡ ಕಂಡವರಿಗೆ ಥಳಿಸಿ ಗೂಂಡಾಗಿರಿ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.ಹುಬ್ಬಳ್ಳಿಯ ಕೋರ್ಟ್ ವೃತ್ತದ ಬಳಿಯಿರುವ ಗ್ರೀನ್ ಗೇಟ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಗಂಗಾಧರ ನಗರದ ಯುವಕ ಬಾರ್ ಗೆ ಕುಡಿಯಲು ಬಂದಾಗ ಗಲಾಟೆ ಆರಂಭವಾಗಿದೆ. ಅಷ್ಟರಲ್ಲಿ ಮೂವರು ವೇಟರ್ ಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ರೆಸ್ಟೋರೆಂಟ್ ನಲ್ಲಿ ಗೊಂದಲ ಉಂಟಾಗಿದೆ.ಈ ಗಲಾಟೆ ನೋಡಿ ಹಲವು ಗ್ರಾಹಕರು ಓಡಿ ಹೋಗಿದ್ದಾರೆ. ಸಮಯ ಮೀರಿದ ಮೇಲೆಯೂ ಬಾರ್ ನಲ್ಲಿ ಡ್ರಿಂಕ್ಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಇನ್ನು ಅಭಿಜಿತ್ ಎಂಬ ವೇಟರ್ ಗೆ ಕಿವಿಯಲ್ಲಿ ರಕ್ತ ಬರುವಂತೆ ರಾಡ್ ನಿಂದ ಯುವಕರು ಥಳಿಸಿದ್ದಾರೆ.ಈ ಗಲಾಟೆ ಬಗ್ಗೆ ಉಪನಗರ ಠಾಣೆಯ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಬರುವ ಮುನ್ನವೇ ತನ್ನ ಸಹಚರ ಜೊತೆ ಬಿಜೆಪಿ ಮುಖಂಡನ ಸೋದರ ಪರಾರಿಯಾಗಿದ್ದಾನೆ.Sign in to your account
Username or Email Address


Password

 Remember Me


