ತುಮಕೂರು: ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳ ವಿರುದ್ಧ ತುಮಕೂರಿನಲ್ಲಿ ಗರಂ ಆಗಿದ್ದಾರೆ.ನಗರದ ಉಡುಪಿ ಡಿಲಕ್ಸ್ ನಲ್ಲಿ ಸಿದ್ಧಗಂಗಾ ಮಠ ಆಧರಿಸಿದ ಭೂ ಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆಂದು ಶಿವರಾಜ್ ಕುಮಾರ್ ಹೋಗಿದ್ದರು. ಈ ವೇಳೆ ಅಭಿಮಾನಿಗಳಿಂದ ಕಿರಿಕಿರಿಯಿಂದ ಅವರ ಮೇಲೆ ರೇಗಿದ್ದಾರೆ.ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಭಿಮಾನಿಗಳು ಮೊಬೈಲ್ ನಿಂದ ವಿಡಿಯೋ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ನಟ, ಪ್ಲೀಸ್ ಸೈಲೆನ್ಸ್ ಸೈಲೆನ್ಸ್ ಎಂದು ಒಂದೇ ಸಮನೇ ಕೂಗಿದ್ದಾರೆ. ಅಲ್ಲದೇ ಮೊಬೈಲ್ ಯಾವ ಪುಣ್ಯಾತ್ಮ ಕಂಡು ಹಿಡಿದಿದ್ದಾನೋ ಎಂದು ಶಿವಣ್ಣ ರೇಗಿದ್ದಾರೆ. ಶಿವರಾಜ್ ಕುಮಾರ್ ರನ್ನು ಸುತ್ತುವರಿದು ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದರಿಂದ ಅವರ ಮೇಲೆ ರೇಗಿದ್ದಾರೆ ಎಂದು ಹೇಳಲಾಗಿದೆ.Sign in to your account
Username or Email Address


Password

 Remember Me


