ಮಂಡ್ಯ: ಅನಾಥವಾಗಿ ಓಡಾಡಿಕೊಂಡಿದ್ದ ಕೋತಿ ಮರಿಯನ್ನು ಕುರಿಗಾಹಿಯೊಬ್ರು ತಂದು ಮಗುವಿನಂತೆ ಸಾಕಿದ್ರು. ಕುರಿಗಳೊಂದಿಗೆ ಬೆಳೆದ ಕೋತಿ ರೈತನ ಜೊತೆ ದಿನ ಬೆಳಗ್ಗೆ ಕುರಿ ಕಾಯಲು ಹೋದ್ರೆ ಸಂಜೆ ಕುರಿಗಳೊಂದಿಗೆ ಮನೆಗೆ ವಾಪಸ್ ಬರುತ್ತೆ. ಹೀಗಿರೋ ಈ ಕೋತಿಗೆ ಕುರಿಯ ಮರಿಗಳಂದ್ರೆ ಆಗಲ್ಲ.ಹೀಗೆ ಕುರಿಕಾಯುತ್ತ, ಸದಾ ಕುರಿಗಳ ಜೊತೆ ಓಡಾಡಿಕೊಂಡಿರುವ ಈ ಕೋತಿ ಇರೋದು ಮಂಡ್ಯದ ಮಳವಳ್ಳಿ ತಾಲೂಕಿನ ಓದುಬಸಪ್ಪನದೊಡ್ಡಿ ಗ್ರಾಮದ ರೈತ ಮಾದೇಗೌಡರ ಮನೆಯಲ್ಲಿ. ಗುಂಪಿನಿಂದ ತಪ್ಪಿಸಿಕೊಂಡು ಬಂದು ಮನೆಯ ಬಳಿ ಓಡಾಡುತ್ತಿದ್ದ ಮರಿಕೋತಿಯನ್ನು ಮಾದೇಗೌಡ ಪ್ರೀತಿಯಿಂದ ಆಹಾರ ಕೊಟ್ಟು ಸಾಕಿದ್ರು. ಮಾದೇಗೌಡರು ನೂರಾರು ಕುರಿಗಳನ್ನು ಸಾಕಿದ್ದು, ಕೋತಿ ಪ್ರತಿದಿನ ಮಾದೇಗೌಡರ ಜೊತೆ ಕುರಿ ಕಾಯಲು ಹೋಗುತ್ತೆ. ಬೆಳಗ್ಗೆ ಕುರಿಗಳೊಂದಿಗೆ ಹೋಗುವ ಕೋತಿ ಮತ್ತೆ ಸಂಜೆ ಕುರಿಗಳೊಂದಿಗೆ ವಾಪಸ್ ಬಂದು ಕುರಿ ಕೊಟ್ಟಿಗೆಯಲ್ಲೇ ಕುರಿಗಳೊಂದಿಗೆ ಮಲಗುತ್ತೆ. ಆದ್ರೆ ಈ ಕೋತಿಗೆ ಕುರಿಮರಿಗಳಂದ್ರೆ ಆಗಲ್ಲ. ಕುರಿ ಮರಿ ಹಾಕಿದ ತಕ್ಷಣ ಅವನ್ನು ಕಚ್ಚಿ ಸಾಯಿಸುತ್ತೆ.ಕೋತಿ ದೇವರ ಸಮಾನ ಎಂದು ನಂಬಿರುವ ಮಾದೇಗೌಡರ ಮನೆಯವರು ಕುರಿಯ ಮರಿಗಳನ್ನು ಸಾಯಿಸಿದ್ರೂ ಕೂಡ ಕೋತಿಯನ್ನು ಸಹಿಸಿಕೊಂಡಿದ್ದಾರೆ. ಕೋತಿಯ ಆಕ್ರೋಶಕ್ಕೆ ಈಗಾಗಲೇ ನೆರೆಹೊರೆಯವರ ಮರಿಗಳು ಸೇರಿದಂತೆ 20 ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿವೆ.ಕುರಿಗಳನ್ನು ಕಾಯುತ್ತ ರೈತ ಮಾದೇಗೌಡ ಅವರ ಅರ್ಧ ಶ್ರಮ ಕಡಿಮೆ ಮಾಡಿದ್ದ ಕೋತಿ ಇದೀಗ ಸಣ್ಣ ಮರಿಗಳನ್ನು ಕೊಲ್ಲುವ ಕೆಟ್ಟ ಗುಣ ಬೆಳೆಸಿಕೊಂಡು ಕಿಲ್ಲರ್ ಕೋತಿಯಾಗಿ ಪರಿಣಮಿಸಿದೆ. ಹೀಗಾಗಿ ಮಾದೇಗೌಡರ ಮನೆಯವರು ಹೇಗಾದರೂ ಅರಣ್ಯ ಇಲಾಖೆಯವರಿಗೆ ಈ ಕೋತಿಯನ್ನು ಹಿಡಿದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ.Sign in to your account
Username or Email Address


Password

 Remember Me


