ಚಿಕ್ಕಬಳ್ಳಾಪುರ: ದೇವಾಲಯದ ಎದುರೇ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗವಿಕುಂಟಹಳ್ಳಿ ಬಳಿ ನಡೆದಿದೆ.ಗ್ರಾಮದ ಹೊರವಲಯದ ತಿರುಮಲೇಶ್ವರ ಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲಿನಲ್ಲೇ ಅದೇ ಗ್ರಾಮದ 40 ವರ್ಷದ ಮಂಜುನಾಥ್ ಮೃತದೇಹ ಪತ್ತೆಯಾಗಿದೆ. ಮಂಜುನಾಥ್ ವಿಷ ಸೇವಿಸಿ ಆತ್ಮಹತ್ಯೆಕೊಂಡಿರುವ ಶಂಕೆ ವ್ಯಕ್ತವಾಗಿದೆ.ಮೃತ ಮಂಜುನಾಥ ಕಳೆದ 3 ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಆದರೆ ಶನಿವಾರ ದೇವಾಲಯದ ಮುಂದೆ ಶವವಾಗಿ ಪತ್ತೆಯಾಗಿದ್ದಾರೆ. ದೇವಾಲಯದ ಮಂದೆ ಮಂಜುನಾಥ್ ಮೃತಪಟ್ಟಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


