ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ನಟ ನಿರ್ದೇಶಕ ಪ್ರಥಮ್ ಅವರು ಪುನೀತ್ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸ್ಟಾರ್ ಹುಟ್ಟುಹಬ್ಬವಾದರೂ ಪ್ರಥಮ್ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಶುಭಾಶಯ ತಿಳಿಸುತ್ತಾರೆ. ಇದೀಗ ನಟ ಪುನೀತ್ ರಾಜ್ ಕುಮಾರ್ ಅವರು ಶನಿವಾರ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ್ ಅವರು ಪವರ್ ಸ್ಟಾರ್ ಪುನೀತ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ವಿಭಿನ್ನವಾಗಿರುವ ಉಡುಗೊರೆಯನ್ನು ನೀಡಿದ್ದಾರೆ.ಬಂಗಾರದ ಮನುಷ್ಯನ ಪುತ್ರನಿಗೆ ಪ್ರಥಮ್ ಮತ್ತೆ ಬಂಗಾರದ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಬಾರಿಯೂ ಪ್ರಥಮ್ ಅಪ್ಪು ಅವರಿಗೆ ಚಿನ್ನ ಉಂಗುರವನ್ನು ನೀಡಿ ಶುಭ ಕೋರಿದ್ದರು. ಈ ಬಾರಿ ಚಿನ್ನ ಲೇಪಿತ ವೆಂಕಟೇಶ್ವರ ದೇವರ ಫೋಟೋವನ್ನು ಕೊಟ್ಟಿದ್ದಾರೆ. ಪ್ರಥಮ್ ಜೊತೆಯಲ್ಲಿ ಸಾರಾ ಗೋವಿಂದು ಹಾಗೂ ಪುತ್ರ ಅನೂಪ್ ಕೂಡ ಪವರ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.ಪುನೀತ್ ಪ್ರಥಮ್ ಅವರ ಉಡುಗೊರೆಯನ್ನ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪುನೀತ್, ಪ್ರಥಮ್ ಅವರಿಗೆ ಶೋ ನಲ್ಲಿ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು.Happy & proud moment… @PuneethRajkumar @PowerStarPunith @PuneethOfficial boss birthday, my small tribute.. Golden venkateshwara…70 kg ಬೆಲೆ ಕಟ್ಟಲಾಗದ ಬಂಗಾರ (ನಮ್ ಅಪ್ಪು ಬಾಸ್) @AppuFc007 ನನ್ನ ಕಡೆಯಿಂದ ಪುಟ್ಟ ನೈವೇಧ್ಯ.. @chitraloka pic.twitter.com/wlDxb4fTtl— Olle Hudga Pratham (@OPratham) March 17, 2018Sign in to your account
Username or Email Address


Password

 Remember Me


