ಬೆಂಗಳೂರು: ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲಿದ್ದಾರೆ.ತೆಲುಗು ಭಾಷಿಕರು ಹೆಚ್ಚಾಗಿರುವ ಅಥವಾ ಆಂಧ್ರ, ತೆಲಂಗಣ ಪ್ರದೇಶಗಳಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ಪ್ರಚಾರ ಮಾಡಲಿದ್ದಾರೆ. ಪವರ್ ಸ್ಟಾರ್ ಗೆ ಜಾಗ್ವಾರ್ ಚಿತ್ರದ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಸಾಥ್ ನೀಡಲಿದ್ದಾರೆ.ಜಾಗ್ವಾರ್ ಚಿತ್ರದ ಪ್ರಚಾರದ ವೇಳೆ ಪವನ್ ಕಲ್ಯಾಣ್ ಅವರನ್ನು ಸಂಪರ್ಕಿಸಿದ್ದು, ಇದೀಗ ನಿಖಿಲ್ ಅವರನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಮೂರು ನಾಲ್ಕು ಬಾರಿ ಪವನ್ ಕಲ್ಯಾಣ್ ಜೊತೆ ಚರ್ಚೆ ನಡೆಸಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದರು.  ಇದ್ನನೂ ಓದಿ: ಕರ್ನಾಟಕ ಚುನಾವಣೆಗೆ ಅಜ್ಞಾತವಾಸಿ ಪವನ್ ಕಲ್ಯಾಣ್ ಎಂಟ್ರಿ!Sign in to your account
Username or Email Address


Password

 Remember Me


