ಬೆಂಗಳೂರು: ಇಂದು ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ- ಸಡಗರದಿಂದ ಆಚರಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನತೆಗೆ ಶುಭಾಶಯ ತಿಳಿಸಿದ್ದಾರೆ.ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯವನ್ನು ಆ ದೇವರು ಕರುಣಿಸಲಿ ಅಂತ ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಪ್ರಧಾನಿ ವಿಶ್ ಮಾಡಿದ್ದಾರೆ.ರಾಜ್ಯದ ಜನತೆಗೆ ಕನ್ನಡದಲ್ಲೇ ಶಭಾಶಯ ತಿಳಿಸಿದ ಅಮಿತ್ ಶಾ, ನವ ಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ ಅಂತ ಹೇಳಿದ್ದಾರೆ. ತಮ್ಮ ಟ್ವೀಟ್ ನಲ್ಲಿ `ಚಾಂದ್ರಮಾನ ಯುಗಾದಿಯ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಮಸ್ತ ನಾಗರಿಕರ ಬದುಕು ಸುಖ, ಶಾಂತಿ, ಸಮೃದ್ಧಿ ಮತ್ತು ಆಯುರಾರೋಗ್ಯದಿಂದ ಕೂಡಿರಲಿ ಎಂದು ಆಶಿಸುತ್ತೇನೆ. ಬನ್ನಿ, ನವಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಅಂತ ಹೇಳಿದ್ದಾರೆ.Happy Ugadi! I pray for a year filled with happiness and good health.— Narendra Modi (@narendramodi) March 18, 2018ಚಾಂದ್ರಮಾನ ಯುಗಾದಿಯ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಮಸ್ತ ನಾಗರಿಕರ ಬದುಕು ಸುಖ, ಶಾಂತಿ, ಸಮೃದ್ಧಿ ಮತ್ತು ಆಯುರಾರೋಗ್ಯದಿಂದ ಕೂಡಿರಲಿ ಎಂದು ಆಶಿಸುತ್ತೇನೆ. ಬನ್ನಿ, ನವಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. pic.twitter.com/6BRSze8lEf— Amit Shah (@AmitShah) March 18, 2018






 Advertisement 




Sign in to your account
Username or Email Address


Password

 Remember Me


