ಬೆಂಗಳೂರು: ನಗರದ ಬಿಎಂಟಿಸಿ ಬಸ್ಸಿನಲ್ಲಿ ಕಾಮುಕ ಮುದುಕನೊಬ್ಬ ಯುವತಿಯ ಮುಂದೆ ತನ್ನ ವಿಕೃತಿ ಮರೆದ ಘಟನೆ ನಡೆದಿದೆ.ಈ ಘಟನೆ ಕೋರಮಂಗಲದ 100 ಫೀಟ್ ರಸ್ತೆಯ ಈಝೋನ್ ಬಳಿ ಮಾರ್ಚ್ 13ರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಏನಿದು ಘಟನೆ?: ಮಂಗಳವಾರ ಸಂತ್ರಸ್ತ ಯುವತಿ ಕೆಎ57 ಎಫ್ 2654 ನಂಬರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಕೆ ಕುಳಿತುಕೊಂಡಿದ್ದ ಸೀಟ್ ಪಕ್ಕದಲ್ಲೇ ಸುಮಾರು 65 ವರ್ಷದ ಮುದುಕ ನಿಂತಿದ್ದನು. ಮುದುಕನ ನೋಡಿದ ಯುವತಿ ನೀವು ಕುಳಿತುಕೊಳ್ಳುತ್ತೀರಾ ಅಂತ ಕೇಳಿದ್ದಾರೆ. ಆಗ ಆರೋಪಿ ಮುದುಕ ಇಲ್ಲ. ನೀವೇ ಕುಳಿತುಕೊಳ್ಳಿ ಅಂತ ಹೇಳಿದ್ದಾನೆ. ಅಂತೆಯೇ ಯುವತಿ ತನ್ನ ಪಾಡಿಗೆ ಕುಳಿತಿದ್ದರು. ಇದೇ ಸಂದರ್ಭದವನ್ನು ಉಪಯೋಗಿಸಿಕೊಂಡ ಕಾಮುಕ ಮುದುಕಪ್ಪ, ತನ್ನ ಪ್ಯಾಂಟ್ ಜಿಪ್ ತೆರೆದು ಯುವತಿಯ ಕೈಗೆ ಉಜ್ಜುತ್ತಿದ್ದನು. ಇದು ಸಂತ್ರಸ್ತೆಯ ಗಮನಕ್ಕೆ ಬಂದಿದ್ದು, ಗಾಬರಿಗೊಂಡ ಆಕೆ ಕೂಡಲೇ ಏನ್ ಮಾಡ್ತಾ ಇದ್ದೀಯಾ ಎಂದು ಪ್ರಶ್ನಿಸಿದ್ದಾರೆ.ಯುವತಿ ಕೋಪಗೊಂಡಿದ್ದನ್ನು ನೋಡಿದ ಮುದುಕ ಆಕೆಯ ಮೇಲೆಯೇ ಎಗರಾಡಿದ್ದಾನೆ. ನಂತರ ಸಹ ಪ್ರಯಾಣಿಕರು ನಿಮ್ಮ ತಂದೆಯ ವಯಸ್ಸಾಗಿದೆ ಹೋಗ್ಲಿ ಬಿಡಮ್ಮ ಅಂತ ಹೇಳಿದ್ದಕ್ಕೆ ಯುವತಿ ಸುಮ್ಮನಾಗಿದ್ದಾರೆ. ಬಳಿಕ ಕಾಮುಕ ಮುದುಕನ್ನು ಬಸ್ ಚಾಲಕ ಮತ್ತು ನಿರ್ವಾಹಕ ಬಸ್‍ನಿಂದ ಇಳಿಸಿದ್ದಾರೆ.ಘಟನೆಯಿಂದ ಬೇಸತ್ತ ಸಂತ್ರಸ್ತೆ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


