ಬೆಂಗಳೂರು: ನಗರದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ಮಾಲೀಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈಗ ಆತನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.ಆಕಾಶ್ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ಮಾಲೀಕ ಮುನಿರಾಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ. ತನ್ನದೇ ಸಂಸ್ಥೆಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಗೆ ಮುನಿರಾಜು ಲೈಂಗಿಕ ಕಿರುಕುಳ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ಸಂಸ್ಥೆಯ ಮಾಲೀಕ, ಆತನ ಪತ್ನಿ ಹಾಗೂ ಸಹಾಯಕಿ ವಿರುದ್ಧ ಮಹಿಳೆ ದೇವನಹಳ್ಳಿ ಠಾಣೆ ಪೊಲೀಸರಿಗೆ ಮಾರ್ಚ್ 12ರಂದು ದೂರು ನೀಡಿದ್ದಾರೆ. ವೈದ್ಯಕೀಯ ಸಂಸ್ಥೆಯಲ್ಲಿ ಎಂಸಿಐ ನಿಯಮಾವಳಿ ಪ್ರಕಾರ ರೋಗಿಗಳು ಇರಲಿಲ್ಲ. ಆದರೆ ಎಂಸಿಐ ಇನ್‍ಸ್ಪೆಕ್ಷನ್ ವೇಳೆ ನಕಲಿ ರೋಗಿಗಳುನ್ನು ಆಸ್ಪತ್ರೆಗೆ ಕರೆಸಲಾಗುತಿತ್ತು. ಈ ಕೆಲಸವನ್ನು ಸಂತ್ರಸ್ತೆ ಮಾಲೀಕರ ಸೂಚನೆಯಂತೆ ಮಾಡುತ್ತಿದ್ದರು. ಬಳಿಕ ತಾನು ಮಾಡಿದ್ದು ತಪ್ಪೆಂದು ಗೊತ್ತಾಗಿ ಕೆಲಸ ಬಿಡಲು ಮುಂದಾಗಿದ್ದರಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.


 Advertisement 




 Advertisement 






 Advertisement 




Sign in to your account
Username or Email Address


Password

 Remember Me


