ಬೆಳಗಾವಿ: ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತಿ ಅಧಿಕಾರಿಯ (ಪಿಡಿಒ) ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.ಅಮ್ಮಣಗಿ ಗ್ರಾಮದ 32 ವರ್ಷದ ಸಂಜಯ್ ಕೋಕಿಟ್ಕರ್ ಎಂಬಾತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮ ಪಂಚಾಯಿತಿಯ ಪಿಡಿಒ 42 ವರ್ಷದ ಗೋಪಾಲ್ ಕರೋಷಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ.ಶೌಚಾಲಯ ಇಲ್ಲದವರು ನಿರ್ಮಿಸಿಕೊಳ್ಳಿ ಅಂತ ಗ್ರಮದ ಜನರಿಗೆ ಪಿಡಿಒ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಸಂಜಯ್, ಶೌಚಾಲಯ ಇಲ್ಲದವರು ಬಯಲು ಶೌಚಾಲಯಕ್ಕೆ ಹೋಗದೆ ಬೇರೆ ಎಲ್ಲಿ ಹೋಗಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಕೂಡಲೇ ಹಲ್ಲೆಗೊಳಗಾದ ಪಿಡಿಒ, ವ್ಯಕ್ತಿಯ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ಹಿನ್ನೆಲೆಯಲ್ಲಿ ಸಂಜಯ್ ಕೋಕಿಟ್ಕರನನ್ನು ಸಂಕೇಶ್ವರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.Sign in to your account
Username or Email Address


Password

 Remember Me


