ಧಾರವಾಡ: ಆಸ್ಪತ್ರೆಯ ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖ ಸುಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಧಾರವಾಡ ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗು ಲಾವಣ್ಯಳನ್ನ ಪೋಷಕರು ನಗರದ ತಾವರಗೇರೆ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ವೇಳೆ ಆಸ್ಪತೆಯ ನರ್ಸ್ ಮಗುವಿಗೆ ನೆಬ್ಯುಲೈಸರ್ ಮಾಡುವಾಗ ಬಾಯಿಯ ಅಕ್ಕಪಕ್ಕದಲ್ಲೆಲ್ಲ ಸುಟ್ಟುಹೋಗಿದೆ.ನಗರದ ಗೊಲ್ಲರ ಕಾಲೋನಿಯ ನಾಗೇಶ ಹಾಗೂ ಅಂಜಲಿ ಎಂಬವರ ಮಗುವಿನ ಮುಖ ಸುಟ್ಟು ಗಾಯಗೊಂಡಿದ್ದು, ಈ ಘಟನೆ ನಡೆದು ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ. ಸದ್ಯ ಅದೇ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಲು ಕೂಡಾ ಉಣಿಸಿಲು ಆಗದಂತೆ ಮುಖಕ್ಕೆ ಗಾಯವಾಗಿರೋದ್ರಿಂದ ಮಗುವಿಗೆ ಸಲೈನ್ ಮೇಲೆ ಮಾತ್ರ ಇಡಲಾಗಿದೆ.ಈ ಘಟನೆ ನಡೆದಿರುವ ಬಗ್ಗೆ ಆಸ್ಪತೆಯ ವೈದ್ಯರಿಗೆ ಕೇಳಿದರೆ, ನಿಮ್ಮ ಕೈಯಲ್ಲೇ ನೆಬ್ಯುಲೈಸರ್ ಕೊಡಲಾಗಿತ್ತು. ನೀವೇ ಇದಕ್ಕೆ ಜವಾಬ್ದಾರಿ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


