ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬಳು ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಿಶಿಣಕುಂಟೆಯಲ್ಲಿ ನಡೆದಿದೆ.ಮೂಲತಃ ಕಲಬುರಗಿ ಜಿಲ್ಲೆಯ ಕೊಲ್ಲೂರು ಗ್ರಾಮದ 18 ವರ್ಷದ ಭೀಮವ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಯುವತಿ. ಉದ್ಯೋಗಕ್ಕಾಗಿ ಭೀಮವ್ವ ಕುಟುಂಬ ಸಮೇತರಾಗಿ ನೆಲಮಂಗಲ ಆದರ್ಶನಗರದಲ್ಲಿ ಮೂರು ವರ್ಷದ ಹಿಂದೆ ನೆಲೆಸಿದ್ದರು.ಭೀಮವ್ವ ಅಡಕಮಾರನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಇಂದು ಬೆಳಿಗ್ಗೆ ಎಂದಿನಂತೆ ಎಲ್ಲರೂ ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ಭೀಮವ್ವ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಭೀಮವ್ವ ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಆಕೆಗೆ ಆರೋಗ್ಯ ಸಮಸ್ಯೆ ಇತ್ತು ಎಂದು ತಿಳಿದು ಬಂದಿದೆ.ಈ ಘಟನೆ ನೆಲಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






 Advertisement 




Sign in to your account
Username or Email Address


Password

 Remember Me


