ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮೊಯ್ಲಿ ಟ್ವೀಟ್ ನಿಂದ ಇವತ್ತು ಲೋಕೋಪಯೋಗಿ ಸಚಿವ ಮಹದೇವಪ್ಪ ಟೆನ್ಷನ್ ಆದಂತೆ ಕಂಡು ಬಂದಿದ್ದರು.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಒತ್ತಡ ನಿವಾರಣೆ ಮಾಡಿಕೊಳ್ಳುತ್ತಿದ್ದರು.ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬಳಿಕ ಮಾತನಾಡಿದ ಅವರು, ನಿಂಬೆಹಣ್ಣ ನಾನು ಇಟ್ಕೊಂಡಿದ್ದಲ್ಲ. ಬೇರೆಯವರು ಕೊಟ್ಟಿದ್ದು ಎಂದು ಹಾಸ್ಯ ಮಾಡಿದರು. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ. ಇದನ್ನ ಕೈಯಲ್ಲಿ ಇಟ್ಟುಕೊಳ್ಳೊದರಿಂದ ಒಳ್ಳೆಯದು. ನಾನು ವೈಜ್ಞಾನಿಕವಾಗಿ ಚಿಂತನೆ ಮಾಡುತ್ತೇನೆ ಎಂದು ಹೇಳಿ ನಿಂಬೆಹಣ್ಣನ್ನು ಕೈಯಲ್ಲಿ ಇಟ್ಟುಕೊಂಡಿದ್ದಕ್ಕೆ ಸಮರ್ಥನೆ ನೀಡಿದರು. ಇದನ್ನೂ ಓದಿ: ಟ್ವೀಟ್‍ಗೆ ನನಗೂ ಯಾವುದೇ ಸಂಬಂಧವಿಲ್ಲ, ಕೈ ಗೆಲುವಿನ ವಾತಾವರಣವನ್ನು ಕೆಡಿಸಲು ವಿರೋಧಿಗಳ ಕೆಲ್ಸ: ಮಹದೇವಪ್ಪSign in to your account
Username or Email Address


Password

 Remember Me


