ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿಯೇ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇದೀಗ ಕಾಂಗ್ರೆಸ್ ಪಕ್ಷದ ಹಣದ ಪ್ರಭಾವ ಬಿಚ್ಚಿಟ್ಟಿದ್ದಾರೆ.ಈ ಕುರಿತು ಟ್ವೀಟ್ ಮಾಡಿರೋ ವೀರಪ್ಪ ಮೊಯ್ಲಿ, `ಕಾಂಟ್ರಾಕ್ಟರ್‍ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಎಂದಿದ್ದಾರೆ. ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಅವರು ಆರೋಪ ಮಾಡಿದ್ದಾರೆ.ಈ ಟ್ವೀಟನ್ನು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿಯ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯದ ನಾಯಕರಿಗೆ ನೇರವಾಗಿ ತಲುಪಿಸುವ ಜೊತೆಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.ಈ ಮೂಲಕ ಮೊಯ್ಲಿ ಅವರು ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಪರೋಕ್ಷವಾಗಿ ಸಿಡಿದೆದ್ದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಖೇಣಿ ಹಾಗೂ ಹಾಲಿ ಶಾಸಕರಿಗೆ ಟಿಕೆಟ್ ಕೊಡೋ ವಿಚಾರದಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.ಆದ್ರೆ ಇದೀಗ ವೀರಪ್ಪ ಮೊಯ್ಲಿ ನೇರವಾಗಿ ಲೋಕೋಪಯೋಗಿ ಸಚಿವ ಮಹದೇವಪ್ಪ ಅವರನ್ನೇ ಟಾರ್ಗೆಟ್ ಮಾಡಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.https://twitter.com/moilyv/status/974322120586158080https://twitter.com/HarshaMoilyINC/status/974327614306443264Sign in to your account
Username or Email Address


Password

 Remember Me


