ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಗ್ರಾಮದಲ್ಲಿರುವ RTO ಚೆಕ್‍ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ.ಎಸಿಬಿ ಎಸ್‍ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಚೆಕ್‍ ಪೋಸ್ಟ್ ನಲ್ಲಿನ ದಾಖಲಾತಿಗಳು ಹಾಗು ಕಚೇರಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ 25,000 ರೂ. ನಗದು ಪತ್ತೆಯಾಗಿದೆ. ಅಕ್ರಮವಾಗಿ ಸಂಗ್ರಹಿಸಿದ್ದ ಹಣ ಜಪ್ತಿ ಮಾಡಲಾಗಿದ್ದು, ಮೋಟಾರ್ ವೆಹಿಕಲ್ ಇನ್ಸ್ ಪೆಕ್ಟರ್ ರಂಜಿತ್, ಇಬ್ಬರು ಹೋಮ್ ಗಾರ್ಡ್ ಹಾಗೂ 5 ಏಜೆಂಟರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.ಕಳೆದ ವರ್ಷ ಕೂಡ ಮಾರ್ಚ್ 7 ರಂದು ಝಳಕಿ ಚಕ್ ಪೋಸ್ಟ್ ಮೇಲೆ ಎಸಿಬಿ ದಾಳಿ ನಡೆಸಿತ್ತು.Sign in to your account
Username or Email Address


Password

 Remember Me


