ಮಂಗಳೂರು: ಶಾಲಾ ವಾಹನವೊಂದು ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಜ್ಜಾವರದ ಕರ್ಲಪಾಡಿಯಲ್ಲಿ ನಡೆದಿದೆ.ಕೆವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ವಾಹನ ಶಾರ್ಟ್ ಸೆಕ್ಯೂರ್ಟ್ ನಿಂದ ಸುಟ್ಟು ಕರಕಲಾಗಿದೆ. ಬುಧವಾರ ಚಾಲಕ ಮಕ್ಕಳನ್ನು ಅವರವರ ಮನೆಗೆ ಬಿಟ್ಟು ನಂತರ ಶಾಲಾ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿದ್ದರು.ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶಾಲಾ ವಾಹನದಲ್ಲಿ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಶಾಲಾ ವಾಹನ ಸುಟ್ಟು ಕರಕಲಾಗಿತ್ತು.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಈ ಬಗ್ಗೆ ಶಾಲಾ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.Sign in to your account
Username or Email Address


Password

 Remember Me


