ಮಡಿಕೇರಿ: ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷನಾರಾರುವ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿಯೊಬ್ಬರು ಲಾಂಗ್ ಹಿಡಿದು ಪುಂಡಾಟ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಪಟ್ಟಣದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.ತೇಜ್ ಕುಮಾರ್ ಈ ಕೃತ್ಯವೆಸಗಿದ ಕಾಂಗ್ರೆಸ್ ಮುಖಂಡ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ತೇಜ್ ಕುಮಾರ್ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. ಚೀಟಿ ಹಣದ ವಿಚಾರಕ್ಕೆ ಸ್ಥಳೀಯರಿಗೆ ಲಾಂಗ್ ತೋರಿಸಿ ರೌಡಿಸಂ ಮಾಡಿದ್ದಾರೆ ಎನ್ನಲಾಗಿದೆ.ತೇಜ್ ಕುಮಾರ್ ಕೊಡ್ಲಿಪೇಟೆ ಎಸ್‍ಆರ್ ಪೆಟ್ರೋಲ್ ಬಂಕ್ ಮಾಲಿಕರಾಗಿದ್ದು, ಕೆಲವು ತಿಂಗಳ ಹಿಂದೆ ಚೀಟಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ತೇಜ್ ಕುಮಾರ್ ತನ್ನ ಪೆಟ್ರೋಲ್ ಬಂಕ್ ಬಳಿ ನಿಂತು ಕಾರಿನಿಂದ ಲಾಂಗ್ ತೆಗೆದು ಅವಾಜ್ ಹಾಕಿದ್ದಾರೆ. ಲಾಂಗ್ ಹಿಡಿದು ಹಣ ಕೇಳಲು ಬಂದವರನ್ನು ಬೆದರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ತೇಜ್‍ ಕುಮಾರ್, ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದಿದೆ. ಈಗ ಚುನಾವಣೆ ವೇಳೆಯಲ್ಲಿ ಮತ್ತೆ ವಿಡಿಯೋ ವೈರಲ್ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನಾನೇನೂ ಮಾತನಾಡಲು ಆಗಲ್ಲ. ಒಂದೇ ವಿಡಿಯೋವನ್ನ ಪದೇ ಪದೇ ವೈರಲ್ ಮಾಡ್ತಿದ್ದಾರೆ. ಇದು ವಿರೋಧ ಪಕ್ಷದವರ ಕೈವಾಡ ಎಂದು ಹೇಳಿದ್ರು.Sign in to your account
Username or Email Address


Password

 Remember Me


